ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ : ಅಜಯ್ ಕುಮಾರ್ ಸಿಂಗ್ ಪರಿಶೀಲನೆ…!

ಮೈಸೂರು,ಡಿಸೆಂಬರ್,26,2020(www.justkannada.in) : ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಮೈಸೂರು ಹಾಗು ಚಾಮರಾಜಪುರಂ ರೈಲ್ವೆ ನಿಲ್ದಾಣಗಳ ಪರಿಶೀಲನೆ ನಡೆಸಿದರು.Teachers,solve,problems,Government,bound,Minister,R.Ashokಈ ಸಂದರ್ಭದಲ್ಲಿ ರೈಲು-ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸ್ಥಾಪಿಸಲಾದ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯನ್ನು(ಪಿ.ಆರ್.ಎಸ್.) ನಿಯೋಜಿಸಲಾಯಿತು.

ಚಾಮರಾಜಪುರಂ ರೈಲ್ವೆ ನಿಲ್ದಾಣದ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯು ವಾರದ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) 10ರಿಂದ 12ರವರೆಗೆ ಮತ್ತು 3ರಿಂದ 6 ರವರೆಗೆ  ಹಾಗು ಭಾನುವಾರ ಬೆಳಗ್ಗೆ 10ರಿಂದ 12ರವರೆಗೆ ಕಾರ್ಯನಿರ್ವಹಿಸುತ್ತದೆ.Mysore-Railway-Station-pitline-Ajay Kumar Singh- reviewed ...ಮೈಸೂರಿನಿಂದ ಪ್ರಯಾಣಿಕರ ಸೇವೆಗಳನ್ನು ಕ್ರಮೇಣ ಪುನರಾರಂಭಿಸಿದ ನಂತರ ಎ.ಕೆ.ಸಿಂಗ್ ಅವರು ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ ಗಳನ್ನು ಪರಿಶೀಲಿಸಿದರು. ಪರಶೀಲನೆ ವೇಳೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

key words : Mysore-Railway-Station-pitline-Ajay Kumar Singh- reviewed …