ಇನ್ಮುಂದೆ ಆನ್ ಲೈನ್ ಮೂಲಕವೂ ರೈಲ್ವೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶ…..

kannada t-shirts

ಮೈಸೂರು,ಸೆಪ್ಟಂಬರ್ 2,2020(www.justkannada.in): ಕೊರೋನಾ ಹಿನ್ನೆಲೆ ರೈಲ್ವೆ ಇಲಾಖೆ ರೈಲ್ವೆ ಮ್ಯೂಸಿಯಂ ಅನ್ನ ಡಿಜಿಟಲೀಕರಣ ಮಾಡಿದ್ದು ಇನ್ಮುಂದೆ ಆನ್ ಲೈನ್ ನಲ್ಲಿ ರೈಲ್ವೆ ಮ್ಯೂಸಿಯಂ ವೀಕ್ಷಣೆ ಮಾಡಬಹುದು.jk-logo-justkannada-logo

ವೆಬ್ ಪ್ಯಾಟ್ರಲ್ ಮೂಲಕ  ರೈಲ್ವೆ ಮ್ಯೂಸಿಯಂ ರೈಲ್ವೆ ಇಲಾಖೆ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ವೆಬ್ ಪ್ಯಾಟ್ರಲ್ ವೀಕ್ಷಣೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ಬಳಿಕ ರೈಲ್ವೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಮ್ಯೂಸಿಯಂ ವೀಕ್ಷಣೆ ಮಾಡಿದರು. ಇದೇ ವೇಳೆ ಮಿನಿ ರೈಲಿನಲ್ಲಿ ಸಂಸದ ಪ್ರತಾಪ್ ಸಿಂಹ ಸಂಚರಿಸಿದರು.

ಸಂಸದ ಪ್ರತಾಪ್ ಸಿಂಹಗೆ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಸೇರಿ ಇತರ ಅಧಿಕಾರಿಗಳು ಸಾಥ್ ನೀಡಿದರು.mysore-railway-museum-online-railway-department

ಮೈಸೂರು ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿದ್ದು ಈ ಹಿನ್ನೆಲೆ ವೀಕ್ಷಕರಿಗೆ ಅನುಕೂಲವಾಗುವಂತೆ ರೈಲ್ವೆ ಮ್ಯೂಸಿಯಂ ವೀಕ್ಷಣೆಗೆ ಆನ್ ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.

Key words: Mysore- Railway Museum – Online- Railway Department

website developers in mysore