ನ.11ರಿಂದ ಮೈಸೂರು ರೇಸ್ ಕ್ಲಬ್ ಓಪನ್: ಇದೇ ಮೊದಲ ಬಾರಿಗೆ ಆನ್ಲೈನ್ ಬೆಟ್ಟಿಂಗ್ ಆರಂಭ…

ಮೈಸೂರು,ನವೆಂಬರ್,11,2020(www.justkannada.in): ಕೊರೋನಾ ಲಾಕ್ ಡೌನ್ ನಿಂದ ಬಂದ್ ಆಗಿದ್ದ ಮೈಸೂರು ರೇಸ್ ಕ್ಲಬ್ ಇದೀಗ ಮತ್ತೆ ಪುನಾರಂಭಗೊಂಡಿದ್ದು, ದೇಶದಲ್ಲೇ ಮೊದಲ ಬಾರಿಗೆ ಆನ್ಲೈನ್ ಬೆಟ್ಟಿಂಗ್ ಆರಂಭಿಸಿದೆ.kannada-journalist-media-fourth-estate-under-loss

ಕೊರೋನಾ ಲಾಕ್ ಡೌನ್ ನಿಂದಾಗಿ ಕಳೆದ 8 ತಿಂಗಳಿಂದ ರೇಸ್ ಕ್ಲಬ್ ಬಂದ್ ಆಗಿದ್ದು ಇದೀಗ ಮತ್ತೆ ಪುನಾರಂಭವಾಗಿದ್ದು, ಇನ್ಮುಂದೆ ಚಳಿಗಾಲದ ರೇಸ್ ಸಂಪೂರ್ಣ ಆನ್ ಲೈನ್ ಆಗಿದೆ. ರೇಸ್ ಕ್ಲಬ್ ನಿಂದ ಆನ್ಲೈನ್ ಬೆಟ್ಟಿಂಗ್ ಪೋರ್ಟಲ್ ಆರಂಭಿಸಲಾಗಿದೆ.

ರೇಸ್ ಪ್ರಿಯರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆನ್ಲೈನ್ ಬೆಟ್ಟಿಂಗ್ ಆರಂಭ ಮಾಡಲಾಗಿದ್ದು, ಮನೆಯಲ್ಲೇ ಕೂತು ರೇಸ್ ವೀಕ್ಷಿಸಲು, ಬೆಟ್ಟಿಂಗ್ ಆಡಲು ಅವಕಾಶ ಮಾಡಿಕೊಡಲಾಗಿದೆ. ರೇಸ್ ಕ್ಲಬ್ ಆನ್ಲೈನ್ ಬೆಟ್ಟಿಂಗ್ ನಡೆಸಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಿದ್ದು, ಕೊರೋನಾ ಹಿನ್ನೆಲೆ ಜನಸಂದಣಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.mysore-race-club-open-nov-11-start-online-betting-first-time

www.betmysore.com ಹಾಗೂ www.turfwinners.com ಎಂಬ ಎರಡು ಆನ್ಲೈನ್ ಪೋರ್ಟಲ್ ನಲ್ಲಿ ಬೆಟ್ಟಿಂಗ್ ಗೆ ಅವಕಾಶ ನೀಡಲಾಗಿದೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ್ ರಾವ್, ಕಳೆದ 8 ತಿಂಗಳು ರೇಸ್ ಕ್ಲಬ್ ಬಂದ್ ನಿಂದಾಗಿ ಸುಮಾರು 3 ಕೋಟಿಯಷ್ಟು‌ ನಷ್ಟ ಉಂಟಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

Key words: Mysore -Race Club Open -nov .11-start – online -betting – first time.