ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ಕೈ ಬಿಡಿ: ಮೌನ ಪ್ರತಿಭಟನೆ…

ಮೈಸೂರು,ಆ,20,2020(www.justkannada.in): ಪ್ರಶಾಂತ್ ಭೂಷಣ್ ನ್ಯಾಯಾಂಗದ ಘನತೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಅಳಿಸಿದೆ ಎಂದು ಸಾಹಿತಿ ದೇವನೂರು ಮಹಾದೇವ್ ಆಕ್ರೋಶ ವ್ಯಕ್ತಪಡಿಸಿದರು.mysore- protests –demanding- judicial- abuse -case - senior lawyer- Prashanth Bhushan

ನಗರದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಗುರುವಾರ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ಕೈ ಬಿಡುವಂತೆ ಒತ್ತಾಯಿಸಿ ಜನಾಂದೋಲಗಳ ಮಹಾಮೈತ್ರಿ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಪ್ರಗತಿಪರ ಚಿಂತಕ ಪ. ಮಲ್ಲೇಶ್ ನೇತೃತ್ವದಲ್ಲಿ ಕಣ್ಣಿಗೆ ಹಾಗೂ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾಕಾರರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ  ದೇವನೂರು ಮಹಾದೇವ್, ಸಾರ್ವಜನಿಕ ಹಿತಾಸಕ್ತಿ ನೆಲಕ್ಕಚಿದ್ದು, ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ಧಮನ ಮಾಡಲು ಪ್ರಶಾಂತ್ ಭೂಷಣ್ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. mysore- protests –demanding- judicial- abuse -case - senior lawyer- Prashanth Bhushan

ಒಬ್ಬ ನ್ಯಾಯವಾದಿಯಾಗಿ ಪ್ರಶಾಂತ್ ಭೂಷಣ್ ಅವರು ತಮ್ಮ ಸೇವೆಯನ್ನು ಸಂಪೂರ್ಣವಾಗಿ ವಕೀಲ ವೃತ್ತಿಗೆ ಅರ್ಪಿಸಿದ್ದಾರೆ. ನ್ಯಾಯಾಲಯ ಕೊಡುವ ತೀರ್ಪನ್ನು ಒಪ್ಪಬೇಕು. ಆದರೆ, ವಿಮರ್ಶೆ ಮಾಡಬಾರದು ಎಂಬುದಿಲ್ಲ. ಆ ನಿಟ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರು ವ್ಯಕ್ತಿಗತವಾಗಿ ಟ್ವೀಟ್ ಮಾಡಿದ್ದಾರೆ ಹೊರತು ಇಡೀ ನ್ಯಾಯಾಂಗ ವ್ಯವಸ್ಥೆ ವಿರುದ್ದ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕ ಹಿತಾಸಕ್ತಿ ಆಳುವ ಸರಕಾರ, ಅಧಿಕಾರಿಗಳು ಮತ್ತು ಪತ್ರಿಕಾರಂಗವನ್ನು ಮೀರಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದು ಬಿದ್ದು ಹೋಗಿದ್ದು, ಸಾರ್ವಜನಿಕರು ಅದನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಮೇಲಿದ್ದ ನಂಬಿಕೆ ಹೋಗುತ್ತಿದ್ದು, ಆ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಸುಪ್ರೀಂಕೋರ್ಟ್ ಮೇಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ,. ದಸಂಸ ಬೆಟ್ಟಯ್ಯ ಕೋಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Key words: mysore- protests –demanding- judicial- abuse -case – senior lawyer- Prashanth Bhushan