ಆನ್‌ಲೈನ್ ಶಿಕ್ಷಣ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ: ಸರ್ಕಾರದ ವಿರುದ್ದ ಆಕ್ರೋಶ…

ಮೈಸೂರು,ಜು,20,2020(www.justkannada.in): ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ ಆನ್ ಲೈನ್ ಶಿಕ್ಷಣವನ್ನ ವಿರೋಧಿಸಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.jk-logo-justkannada-logo

ಜಿಲ್ಲಾಧಿಕಾರಿ ಕಛೇರಿ ಬಳಿ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾಕಾರರು ಧರಣಿ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಆನ್‌ಲೈನ್ ಶಿಕ್ಷಣ ಕೈ ಬಿಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ  50 ಕ್ಕೂ ಹೆಚ್ಚು  ಮಂದಿ ಭಾಗಿಯಾಗಿದ್ದರು.mysore-protests-against-online-education-government

ರಾಜ್ಯದಲ್ಲಿ ಕೊರೋನಾ ಭೀತಿಯಿಂದಾಗಿ ಶಾಲಾಕಾಲೇಜುಗಳನ್ನ ಬಂದ್ ಮಾಡಲಾಗಿದ್ದು ಹೀಗಾಗಿ ಖಾಸಗಿ ಶಾಲೆಗಳು ಆನ್ ಲೈನ್ ಶಿಕ್ಷಣದ ಮೊರೆ ಹೋಗಿವೆ. ಈ ನಡುವೆ ಹೈಕೋರ್ಟ್ ಸಹ ಆನ್ ಲೈನ್ ಶಿಕ್ಷಣಕ್ಕೆ  ಈಗಾಗಲೇ ಗ್ರೀನ್ ಸಿಗ್ನಲ್  ನೀಡಿದೆ.

Key words: Mysore- protests-against- online education-government.