ದೇಗುಲ ತೆರವುಗೊಳಿಸಿದ್ದನ್ನ ವಿರೋಧಿಸಿ ಮೈಸೂರಿನಲ್ಲಿ ತೀವ್ರಗೊಂಡ ಹೋರಾಟ:‘ಕಮಲ’ ಮುಖಂಡರ ಮುಂದೆಯೇ ಶೇಮ್ ಶೇಮ್ ಬಿಜೆಪಿ ಎಂದು ಘೋಷಣೆ.

kannada t-shirts

ಮೈಸೂರು,ಸೆಪ್ಟಂಬರ್,16,2021(www.justkannada.in): ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸಿರುವುದನ್ನ ವಿರೋಧಿಸಿ ಮೈಸೂರಿನಲ್ಲಿ ಹಿಂದೂಪರ ಸಂಘಟನೆಗಳ ಹೋರಾಟ ತೀವ್ರಗೊಂಡಿದೆ.

ದೇಗುಲ ತೆರುವುಗೊಳಿಸಿದ ನಡೆಯನ್ನ ವಿರೋಧಿಸಿ ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಹಿಂದೂ ಜಾಗರಣಾ ವೇದಿಕೆಯಿಂದ‌ ಪ್ರತಿಭಟನೆ ನಡೆಯಿತು. ಈ ವೇಳೆ ಶೇಮ್ ಶೇಮ್ ಬಿಜೆಪಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇದರಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಸ್ಥಳೀಯ ಮುಖಂಡರಿಗೆ ಮುಜುಗರ ಉಂಟಾದ ಘಟನೆ ನಡೆಯಿತು.

ಬಿಜೆಪಿ ಶಾಸಕರು, ಕಾರ್ಯಕರ್ತರ ಮುಂದೆಯೇ ಬಿಜೆಪಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧವೂ ಹಿಂದೂ ಕಾರ್ಯಕರ್ತರು ಘೋಷಣೆ ಕೂಗಿದರು.

Key words: Mysore – protest –against- clearance – temple

ENGLISH SUMMARY…

Protest against temple demolition intensifies in Mysuru
Mysuru, September 16, 2021 (www.justkannada.in): The protest against the demolition of the Huchchagani Mahadevamma temple in Mysuru by the members of several pro-Hindu organizations has intensified.
The demonstrators protested in front of the Kote Anjaneyaswami temple in the city, under the banner Hindu Jagaran Vedike. They shouted slogans ‘shame BJP’, embarrassing BJP MLA S.A. Ramdas and other local leaders.
The demonstrators expressed their ire against the BJP by shouting slogans, in front of the BJP MLA and workers. They also shouted slogans against District In-charge Minister S.T. Somashekar.
Keywords: Protest/ BJP/ temple demolition/ Mysuru/ intensifies

website developers in mysore