ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಗೆ ಸಿದ್ಧತೆ….

kannada t-shirts

ಮೈಸೂರು,ಸೆ,7,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಈ ಬಾರಿ ಸಾಮೂಹಿಕ ಗಣೇಶ ವಿಸರ್ಜನೆಗೆ ಭರದ ಸಿದ್ದತೆ ನಡೆಸಲಾಗಿದೆ.

ಗಣೇಶ ಮೂರ್ತಿಗಳನ್ನು ಪ್ರತ್ಯೇಕವಾಗಿ ವಿಸರ್ಜಿಸುವ ಬದಲು ನಗರದ ಎಲ್ಲಾ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ಒಂದೇ ದಿನ ವಿಸರ್ಜನೆಗೆ  ನಿರ್ಧರಿಸಲಾಗಿದ್ದು ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಬಳಿಕ ಗಣೇಶ ಮೂರ್ತಿಗಳನ್ನ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುವುದು.

ವೀರನಗೆರೆ ಗಣಪತಿ ದೇವಾಲಯದಿಂದ ಸೆಪ್ಟೆಂಬರ್ 8ರಂದು ಬೆಳಿಗ್ಗೆ ಆರಂಭವಾಗಲಿರುವ ಸಾಮೂಹಿಕ ಮೆರವಣಿಗೆ ನಗರದ ಪ್ರಮುಖ ರಸ್ತಯಲ್ಲಿ ಸಂಚರಿಸಿ ಅರಮನೆ ಮೈದಾನದ ಬಳಿ ಕೊನೆಗೊಳ್ಳಲಿದೆ. ಈ ಬಾರಿಯ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆಗೆ ಪೇಜಾವರ ಶ್ರೀಗಳು ಚಾಲನೆ ನೀಡಲಿದ್ದು, ಸಂಸದ ಪ್ರತಾಪ್ ಸಿಂಹ ಸೇರಿ ಪ್ರಮುಖ ನಾಯಕರ ಭಾಗವಹಿಸುವ ಸಾದ್ಯತೆ ಇದೆ. ಮೆರವಣಿಗೆ ಸಾಗುವ ಅಶೋಕ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಂಟಿಂಕ್ಸ್ ರಾರಾಜಿಸುತ್ತಿಸದಸು, ಶಾಂತಿಯುತ ಮೆರವಣಿಗೆ ನಡೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಸಾಮೂಹಿಕ ಗಣಪತಿ ವಿಸರ್ಜನಾ ಮಂಡಳಿಯ ಪ್ರಮುಖರಾದ ಗಿರಿಧರ್ ಮನವಿ ಮಾಡಿದ್ದಾರೆ.

Keywords: mysore- Preparing -dissolution –ganesh murthi

website developers in mysore