ಮೈಸೂರು: ನೇರ ವೇತನಕ್ಕಾಗಿ ಹೋರಾಟ ತೀವ್ರಗೊಳಿಸಿದ ಪೌರಕಾರ್ಮಿಕರ

ಮೈಸೂರು, ಅಕ್ಟೊಬರ್,09,2020 (www.justkannada.in): ನೇರ ವೇತನ ಪಾವತಿ ಆಗ್ರಹಿಸಿ ಪೌರ ಕಾರ್ಮಿಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಇಂದು ಸ್ವಚ್ಚತಾ ಕಾರ್ಯಕ್ಕೆ ತೆರಳದೆ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಸ್ವಚ್ಚತಾ ಕಾರ್ಮಿಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ನೆನ್ನೆ ಪಾಲಿಕೆ ಮುಂಭಾಗ ಪೌರ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದರು.

ಸರ್ಕಾರದಿಂದ ನೇರಪಾವತಿ ನೀಡುವಂತೆ ಆದೇಶವಿದ್ದರೂ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡದ ಪಾಲಿಕೆ. 829 ಮಂದಿ ನೇರಪಾತಿ ಪೌರಕಾರ್ಮಕರು ಹಾಗು 724 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಕೂಡಲೇ ನೇರ ವೇತನ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ನೇರ ವೇತನ ಪಾವತಿ ಮಾಡುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದ ಸ್ವಚ್ಚತಾ ಕಾರ್ಮಿಕಗಳು ಪಟ್ಟು ಹಿಡಿದಿದ್ದಾರೆ. ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಇಂದು ಕರ್ತವ್ಯ ಬಹಿಷ್ಕರಿಸಿರುವ ಪೌರಕಾರ್ಮಿಕರು ಪಾಲಿಕೆಗೆ ಎಚ್ಚರಿಕೆ ರವಾನಿಸಿದ್ದಾರೆ.

file photo