ಇಂದಿನಿಂದ ಸಂಜೆ 6 ಗಂಟೆ ನಂತರ ಅನಗತ್ಯವಾಗಿ ಹೊರಬಂದ್ರೆ ಕ್ರಿಮಿನಲ್ ಕೇಸ್ : ಡಿಸಿಪಿ ಪ್ರಕಾಶ್ ಗೌಡ

 

ಮೈಸೂರು, ಜು.03, 2020 : (www.justkannada.in news) : ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆಯೇ ಇಂದಿನಿಂದ ಮೈಸೂರಿನಲ್ಲಿ 6 ಗಂಟೆ ಬಳಿಕ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಅವಕಾಶ. 6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುವುದಿಲ್ಲ. ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿಕೆ.

jk-logo-justkannada-logo

ಈಗಾಗಲೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 44 ಪ್ರಕರಣ ದಾಖಲಾಗಿದೆ. ಜತೆಗೆ ಇನ್ಮುಂದೆ ನಗರ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ. ಠಾಣೆಯ ಮುಂದೆ ಇರುವ ಹೆಲ್ಪ್ ಡೆಸ್ಕ್ ನಲ್ಲಿ ಒಬ್ಬರಿಗೆ ಮಾತ್ರ ದೂರು ನೀಡಲು ಅವಕಾಶ.

mysore-police-impose-curfew-after.6pm-coid-dcp-prakash.gowda

ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇಲ್ಲ. 55ವರ್ಷ ಮೇಲ್ಪಟ್ಟ ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿವೆ. ಅಂಥವರನ್ನು ಕೊರೊನಾ ಸೇವೆಗೆ ಬಳಸಿಕೊಳ್ಳುತ್ತಿಲ್ಲ. ಈಗಾಗಲೇ ಗೃಹರಕ್ಷಕ ಸಿಬ್ಬಂದಿಗಳು ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗುವುದು. ಮೈಸೂರಿನಲ್ಲಿ ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಹೇಳಿಕೆ.

oooo

key words : mysore-police-impose-curfew-after.6pm-coid-dcp-prakash.gowda