ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು ಮೈಸೂರು ಪೊಲೀಸ್ ಸಿಬ್ಬಂದಿಗಳಿಬ್ಬರು ಮಾಡಿದ ಈ ಮಾನವೀಯ ಕಾರ್ಯ…

ಮೈಸೂರು,ಜೂ,30,2020(www.justkannada.in):  ಕಳೆದೊಂದು ದಿನದಿಂದ ನಿತ್ರಾಣರಾಗಿ ಸೊರಗಿದ್ದ ವ್ಯಕ್ತಿಗೆ ಉಪಚರಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಸಿಬ್ಬಂದಿಗಳಿಬ್ಬರು ಮಾನವೀಯತೆ ಮೆರೆದಿದ್ದಾರೆ.

ಮೈಸೂರು ನಗರದ  ಒಕ್ಕಲಿಗೇರಿ ಗರ್ಗೇಶ್ವರಿ ಚೌಕದ ಸಮೀಪದ ರಸ್ತೆ ಬದಿಯಲ್ಲಿ ಕಳೆದೊಂದು ದಿನದಿಂದ ವ್ಯಕ್ತಿಯೊಬ್ಬರು ನಿತ್ರಾಣವಾಗಿ ಸೊರಗಿದ್ದರು. ಈ ವೇಳೆ ವ್ಯಕ್ತಿಯನ್ನ ನೋಡಿದ ಲಷ್ಕರ್ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ತಮ್ಮೇಗೌಡ, ಮಹದೇವನಾಯಕ ಅವರು ಸಾರ್ವಜನಿಕರ ಸಹಾಯದಿಂದ ಅವರಿಗೆ ಟೀ.ನೀರು ಕುಡಿಸಿ ಉಪಚರಿಸಿ ಸ್ವತಃ ಅವರ ಬಟ್ಟೆಗಳನ್ನು ಬದಲಿಸಿ ಕೃಷ್ಣರಾಜ(KR) ಆಸ್ಪತ್ರೆಗೆ ಅ್ಯಂಬುಲೆನ್ಸ್ ಕರೆಸಿ  ದಾಖಲಿಸಿದ್ದಾರೆ.

ಈ  ವೇಳೆ ಪೊಲೀಸರ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ ವಕೀಲರಾದ ಪಡುವಾರಹಳ್ಳಿ ಎಂ ರಾಮಕೃಷ್ಣ ಅವರು ತಮ್ಮ ಅಭಿಪ್ರಾಯ ಹೀಗೆ ಹಂಚಿಕೊಂಡಿದ್ದಾರೆ.mysore-police-humanity

ನಾನು ಅದೇ ಮಾರ್ಗವಾಗಿ ಹೋಗುವ ದಾರಿಯಲ್ಲಿ ಖುದ್ದಾಗಿ ನೋಡಿ ಪೋಲಿಸರ ಮಾನವೀಯ ಕಾರ್ಯಕ್ಕೆ ಅವರೊಟ್ಟಿಗೆ ಕೈಜೋಡಿಸಿದೆ. ಜೊತೆಗೆ ಆ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಅವರು ಹದಿನಾರು ಗ್ರಾಮದವರೆಂದು ಹೇಳಿದರು.  ನಾನು ನನ್ನ ಸ್ನೇಹಿತರಾದ ಹದಿನಾರು ಪ್ರಕಾಶ್ ರವರಿಗೆ ಅವರ ಫೋಟೋ ಹೊಡೆದು ಅವರ ವಾಟ್ಸಪ್ ಗೆ ಕಳುಹಿಸಿದೆ ಅವರ ಅವರನ್ನು ಗುರುತಿಸಿ ಅವರ ಮಕ್ಕಳಿಗೆ ವಿಷಯ ತಿಳಿಸಿ ಅವರನ್ನು ಕರೆದುಕೊಂಡು ಹೋಗಲು ನೆರವಾದರು. ಸಾರ್ವಜನಿಕವಾಗಿ ಪೋಲಿಸರ ಜನಸ್ನೇಹಿ  ಕಾರ್ಯವೈಖರಿ ಶ್ಲಾಘನೀಯ ಕಾರ್ಯ, ಪೋಲಿಸರ ಮಾನವೀಯ ಕಾರ್ಯಕ್ಕೆ ನನದೊಂದು ಸಲಾಂ ಎಂದು ಪಡುವಾರಹಳ್ಳಿ ಎಂ ರಾಮಕೃಷ್ಣ  ಶ್ಲಾಘಿಸಿದ್ದಾರೆ.

Key words: mysore- police- Humanity