ಬಾಲಕನ ಮೇಲೆ ಪೊಲೀಸ್ ಸಿಬ್ಬಂದಿ ದರ್ಪ: ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು.

ಮೈಸೂರು,ಜುಲೈ,30,2021(www.justkannada.in): ದೇವರ ಪೂಜೆಗಾಗಿ ಬೇವಿನ ಸೊಪ್ಪು ಕೀಳುತ್ತಿದ್ದ ಬಾಲಕನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು  ಥಳಿಸಿ ಗೇಟ್ ಗೆ ಕಟ್ಟಿಹಾಕಿ ದರ್ಪ ಮೆರೆದಿರುವ  ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗಾಯತ್ರಿಪುಂನ ಪೊಲೀಸ್ ಕ್ವಾಟ್ರಸ್ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಮನೆಯ ಪಕ್ಕದ ಖಾಲಿ ಸೈಟ್ ನಲ್ಲಿದ್ದ ಬೇವಿನ ಮರದಲ್ಲಿ ದೇವರ ಪೂಜೆಗಾಗಿ 11 ವರ್ಷದ ಬಾಲಕ ಬೇವಿನ ಸೊಪ್ಪು ಕೀಳುತ್ತಿದ್ದ. ಈ ವೇಳೆ ಬಾಲಕನನ್ನು ಕೆಳಗಿಸಿ ಥಳಿಸಿರುವ ಪೊಲೀಸ್ ಸಿಬ್ಬಂದಿ ನಂತರ ಬಾಲಕನನ್ನು ತನ್ನ ಮನೆಯ ಗೇಟಿಗೆ ಕಟ್ಟಿಹಾಕಿ ಕ್ರೌರ್ಯ ಮೆರೆದಿದ್ದಾರೆ.

ಸುಮಾರು 40 ನಿಮಿಷಗಳ ಕಾಲ ಬಾಲಕನನ್ನು ಗೇಟಿಗರ ಕಟ್ಟಿಹಾಕಿದ್ದು, ಬಾಲಕನ ಸ್ಥಿತಿ ಗಮನಿಸಿದ ಸ್ಥಳೀಯರು ಪೊಲೀಸ್ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಬಾಲಕನಿಗೆ ಕಟ್ಟಿದ್ದ ದಾರ ಬಿಚ್ಚಿ ಕಳುಹಿಸಿದ್ದಾರೆ, ಪೊಲೀಸ್ ಸಿಬ್ಬಂದಿಯ ಅನಾಗರಿಕ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನ ಕಟ್ಟಿಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು.

ಈ ಕುರಿತು  ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಅವರು ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗದ ಮುಖ್ಯ ನ್ಯಾಯಾಧಿಶರಾದ ಅ್ಯಂಟೋನಿ ಸಬ್ಯಾಸ್ಟಿನ್ ಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗ, ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ಹಾಗೂ ಬಾಲಕನ ಪೊಷಕರ ವಿಚಾರಣೆ ನಡೆಸುತ್ತಿದೆ.  ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ. ಹಾಗೆಯೇ  ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒಡನಾಡಿ ಸಂಸ್ಥೆಯ ಸ್ಯ್ಟಾನ್ಲಿ ಒತ್ತಾಯಿಸಿದ್ದಾರೆ.

Key words: mysore- police –assult- boy- Complaint – State- Children’s -Husbandry –Protection- Commission.