ಮೈಸೂರಿನಲ್ಲಿ ‘ ಡ್ರೋಣ್ ಸಂದೀಪ್’ ಬಂಧನ.

 

ಮೈಸೂರು, ಆ.15, 2020 : (www.justkannada.in news) : ಅತಿಕ್ರಮವಾಗಿ ಡ್ರೋಣ್‌ ಮೂಲಕ ಕೆ.ಆರ್‌.ಎಸ್‌. ಜಲಾಶಯದ ಚಿತ್ರೀಕರಣ ನಡೆಸಿದ್ದ ವಿದ್ಯಾರ್ಥಿ ಬಂಧನ.

ಮೈಸೂರಿನ ಜೆ.ಎಸ್.ಎಸ್. ಪಾಲಿಟೆಕ್ನಿಕ್ ನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೊಮೊ ವ್ಯಾಸಂಗ ಮಾಡುತ್ತಿರುವ 21 ವರ್ಷದ ಸಂದೀಪ್ ಬಂಧಿತ ವಿದ್ಯಾರ್ಥಿ.

mysore-police-arrested-drone-sandeep-KRS-photo.shoot-mandya

ಈತ ಆ.10 ರಂದು ಸಂಜೆ 4 ಗಂಟೆಗೆ ತನ್ನ ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ್ದ ಕೆಆರ್‌ಎಸ್‌ ಜಲಾಶಯದ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ನಿರ್ಬಂಧಿತ ಪ್ರದೇಶವಾದ ಕೆಆರ್‌ಎಸ್‌ ಡ್ಯಾಂ ಮೇಲೆ ಅನುಮತಿ ಇಲ್ಲದೆ ಡ್ರೋನ್ ಹಾರಿಸಿದ್ದ.
ಈ ಘಟನೆಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಕಿಶೋರ್ ಕುಮಾರ್, ಆ.14 ರಂದು ಕೆಆರ್‌ಎಸ್‌ ಠಾಣೆಗೆ ದೂರು‌ ನೀಡಿದ್ದರು .

mysore-police-arrested-drone-sandeep-KRS-photo.shoot-mandya

ಈ ದೂರಿನ ಅನ್ವಯ ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು, ಮೈಸೂರಿನ ಬಲ್ಲಾಳ್ ಸರ್ಕಲ್ ನಲ್ಲಿ ಆರೋಪಿ ಸಂದೀಪ್ ನನ್ನು ಅದೇ ದಿನ ಸಂಜೆ ವೇಳೆಗೆ ಬಂಧಿಸಿ ಕೆ.ಆರ್.ಎಸ್. ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.
ಈ ವೇಳೆ ಆತ, ಅನುಮತಿ ಇಲ್ಲದೆ ಡ್ರೋನ್ ಹಾರಿಸಿದ್ದು, ಜಲಾಶಯ ಚಿತ್ರೀಕರಣ ನಡೆಸಿದ್ದನ್ನು ಒಪ್ಪಿಕೊಂಡ. ಬಂಧಿತ ವಿದ್ಯಾರ್ಥಿಯಿಂದ ಪೊಲೀಸರು , ಕೃತ್ಯಕ್ಕೆ ಬಳಸಿದ ಡ್ರೋಣ್, ಡ್ರೋಣ್ ಕಂಟ್ರೋಲರ್ ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

oooooo

key words : mysore-police-arrested-drone-sandeep-KRS-photo.shoot-mandya