ಮನೆ ಕಳ್ಳತನ ಮಾಡಿದ್ದ ಆರೋಪಿಗಳು ಅಂದರ್: ಚಿನ್ನಾಭರಣ ಮತ್ತು ಗೃಹಪಯೋಗಿ ವಸ್ತುಗಳು ವಶಕ್ಕೆ…

ಮೈಸೂರು,ಡಿಸೆಂಬರ್,29,2020(www.justkannada.in): ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮೈಸೂರಿನ ಮಂಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಜೀಜ್ ಸೇಠ್ ನಗರದ ನಿವಾಸಿ ಮುಜ್ಜು (35), ಮುಜಾಮಿಲ್ ಅಹಮ್ಮದ್ ಅಲಿಯಾಸ್ ಬಾಬು 40) ಬಂಧಿತ ಆರೋಪಿಗಳು. ಬಂಧಿತರ ಬಳಿ 8 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ಗೃಹಪಯೋಗಿ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಿದ ಮಾರುತಿ 800 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. mysore-police-arrest-accused-house-theft-jewelery

ಬಂಧಿತ ಆರೋಪಿಗಳಿಬ್ಬರು ಮನೆ ಬಾಗಿಲು ಮುರಿದು ದರೋಡೆ ಮಾಡಿದ್ದರು. ಆರೋಪಿ ಮುಜ್ಜು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ.  ಮಂಡಿ ಠಾಣೆ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ. ವಿ, ಪಿಎಸ್ಐಗಳಿದ ಶಭರೀಶ್, ಶಿವಕುಮಾರ್, ಎಎಸ್ಐ ಗುರುಸ್ವಾಮಿ ಸೇರಿದಂತೆ ಮಂಡಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Key words: mysore-police-  arrest-accused – house theft- jewelery