ಇಂದಿನಿಂದ ಮೈಸೂರಿನ ಎನ್.ಆರ್ ಕ್ಷೇತ್ರ ಲಾಕ್ ಡೌನ್: ಡಿಸಿಪಿ ಪ್ರಕಾಶ್ ಗೌಡರಿಂದ ಪರಿಶೀಲನೆ…

ಮೈಸೂರು,ಜು,17,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಡುವೆ ಎನ್ .ಆರ್ ಕ್ಷೇತ್ರದಲ್ಲೇ ಹೆಚ್ಚು ಪಾಸಿಟಿವ್ ಕೇಸ್ ಗಳು ಕಂಡು ಬರುತ್ತಿದೆ. ಹೀಗಾಗಿ ಇಂದಿನಿಂದ  ಎನ್.ಆರ್ ಕ್ಷೇತ್ರ ಲಾಕ್ ಡೌನ್ ಮಾಡಲಾಗಿದೆ.jk-logo-justkannada-logo

ಎನ್.ಆರ್.ಕ್ಷೇತ್ರದಲ್ಲಿ ಲಾಕ್‌ಡೌನ್  ಡಿಸಿಪಿ ಪ್ರಕಾಶ್ ಗೌಡ ಅವರು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಲಾಕ್‌ಡೌನ್ ವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಮಯದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಇತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಲಾಕ್‌ಡೌನ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಇದು ನಮಗೆ ಉಪಯೋಗ ಆಗಲಿದೆ. ಇಂದು ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತೇವೆ. ಲಾಕ್ ಡೌನ್ ಸಮಯದಲ್ಲಿ ಸರ್ವೇ ಮಾಡಿ ಇಲ್ಲಿಯೇ ಸೋಂಕಿತರನ್ನ ಪತ್ತೆ ಮಾಡುತ್ತೇವೆ. ಹೀಗಾಗಿ ಇಲ್ಲಿನ ಜನರ ಸಹಕಾರವನ್ನ ನಿರೀಕ್ಷೆ ಮಾಡುತ್ತೆವೆ ಎಂದರು.mysore-nr-constituency-lockdown-today-dcp-prakash-gowda

ಈಗಾಗಲೇ ಲಾಕ್‌ಡೌನ್ ಆರಂಭದಿಂದ 65 ಪ್ರಕರಣ ದಾಖಲಾಗಿದೆ. ಇವತ್ತಿನ ಬಳಿಕ ನಿಯಮ ಉಲ್ಲಂಘಿಸಿದ್ರೆ ಪ್ರಕರಣ ದಾಖಲಿಸುತ್ತೇವೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದರು.

Key words: mysore- NR constituency-lockdown – today- DCP- Prakash Gowda.