“ಮೈಸೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ : ಅನಾವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ”

ಮೈಸೂರು,ಏಪ್ರಿಲ್,10,2021(www.justkananda.in) :  ಮೈಸೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಯಾಗಲಿದ್ದು, ರಾತ್ರಿ  ಪೊಲೀಸರು ಗಸ್ತಿನಲ್ಲಿ ಇರುತ್ತಾರೆ. ಅನಾವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಡಿಸಿಪಿ ಪ್ರಕಾಶ್‌ಗೌಡ ಹೇಳಿದ್ದಾರೆ.

Transport,Employees,Strike,employees,New,weapon,government  

ನಗರದ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕುತ್ತೇವೆ. ಅಲ್ಲಿ ಓಡಾಟ ನಡೆಸಿದರೆ ತಪಾಸಣೆ ನಡೆಯಲಿದೆ. ತುರ್ತು ಸೇವೆ ಇದ್ದರೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಸಿಬ್ಬಂದಿ ಜೊತೆ 100 ಜನ ಹೋಮ್ ಗಾರ್ಡ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದಿದ್ದಾರೆ.

 Mysore-now-Night curfew-Enforcement-Unnecessarily-traveling-Legal action

ಜನಸಂದಣಿ ಇರುವ ಸ್ಥಳದಲ್ಲಿ ಹೋಮ್ ಗಾರ್ಡ್ ಇರುತ್ತಾರೆ. ಅವರು ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ತಪಾಸಣೆ ನಡೆಸುತ್ತಾರೆ. ಚಿತ್ರಮಂದಿರದ ಬಗ್ಗೆ ಸರ್ಕಾರದ ಆದೇಶದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

key words : Mysore-now-Night curfew-Enforcement-Unnecessarily-traveling-Legal action