ನಾಮಪತ್ರಕ್ಕೆ ಆಕ್ಷೇಪಣೆ, ಬಿಜೆಪಿಯ ಗಿಮಿಕ್ ಪಾಲಿಟಿಕ್ಸ್ : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಟೀಕೆ

 

ಮೈಸೂರು, ನ.24, 2021 : ನಾಮಪತ್ರ ಸಲ್ಲಿಕೆಯಲ್ಲಿ ಯಾವುದೇ ಲೋಪವಾಗಿಲ್ಲ. ಅಫಿಡೆವಿಟ್ ಸಲ್ಲಿಸುವಾಗಿನ ಕೆಲ ಸಣ್ಣಪುಟ್ಟ ಸಂಗತಿಗಳನ್ನೇ ದೊಡ್ಡದಾಗಿ ಬಿಂಬಿಸಿ ಬಿಜೆಪಿ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ವಿಧಾನ ಪರಿಷತ್ ಚುನಾವಣಾ ಕಣದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಕ್ಷೇಪ ಸಲ್ಲಿಸಿದ್ದ ಘಟನೆಗೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಹೇಳಿದಿಷ್ಟು..

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕ್ರಮಬದ್ಧವಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ. ಆದರೆ ಅಭ್ಯರ್ಥಿ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಕೆಲ ಟೈಪಿಂಗ್ ಎರರ್ ಕಂಡು ಬಂದಿದೆ. ಇದು ಸಣ್ಣಪುಟ್ಟ ಸಂಗತಿ. ಇದನ್ನು ತಿದ್ದುಪಡಿ ಮಾಡಿ ಸಲ್ಲಿಸಲು ಅವಕಾಶವಿದೆ. ಸುಪ್ರೀಂಕೋರ್ಟ್ ಹಾಗೂ ಚುನಾವಣಾ ಆಯೋಗವೇ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ಹಾಗಾಗಿ ಇಂದು ಸಂಜೆಯೊಳಗೆ ಅಫಿಡೆವಿಟ್ ಮತ್ತೆ ಸಲ್ಲಿಸುತ್ತಿದ್ದೇವೆ.

ಆದರೆ , ಈ ಸಣ್ಣಪುಟ್ಟ ಸಂಗತಿಗಳನ್ನೇ ಬಿಜೆಪಿ ದೊಡ್ಡದು ಎಂಬಂತೆ ಆಕ್ಷೇಪಣೆ ಸಲ್ಲಿಸಿ ಪ್ರಚಾರ ತೆಗೆದುಕೊಳ್ಳುತ್ತಿದೆ ಅಷ್ಟೆ. ಇದು ಬಿಜೆಪಿಯವರ ಗಿಮಿಕ್ ಪಾಲಿಟಿಕ್ಸ್. ಈಗ, ಕಾಂಗ್ರೆಸ್ ಸಹ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಹಾಗೂ ಅಫಿಡೆವಿಟ್ ಪರಿಶೀಲಿಸಿದ್ದು, ಅದರಲ್ಲಿ ಹಲವಾರು ಲೋಪಗಳು ಕಂಡು ಬಂದಿದೆ. ಈ ಬಗ್ಗೆ ಪಕ್ಷ ಆಕ್ಷೇಪಣೆ ಸಲ್ಲಿಸಲಿದೆ ಎಂದು ಲಕ್ಷ್ಮಣ್ ತಿಳಿಸಿದರು.

KSRTC-Privatization-Doing-Funeral-BJP-KPCC-spokesman-M.Laxman-accused

KEY WORDS : mysore-nomination-bjp-objects-congress-candidate