ಸಂಚಾರಿ ಪೊಲೀಸರ “BODY CAM ” ಹದ್ದಿನ ಕಣ್ಣು ; ನಾಳೆಯಿಂದಲೇ ನೂತನ ದಂಡ ವಸೂಲಿ ಜಾರಿಗೆ.

 

ಮೈಸೂರು, ಸೆ.06, 2019 : ( www.justkannada.in news ) ನಾಳೆಯಿಂದ ಮೈಸೂರು ನಗರದಲ್ಲಿ ‘ ಬಾಡಿ ಕ್ಯಾಮ್ ‘ ಧರಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.  ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಳ ಮಾಡಿ ಕೇಂದ್ರ ಸರಕಾರ ಪರಿಷ್ಕತ ದರ ವಿಧಿಸಿದೆ. ಈ ನೂತನ ಆದೇಶ ನಾಳೆಯಿಂದ ಮೈಸೂರು ನಗರದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಶುಕ್ರವಾರ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಸಂಚಾರ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ಈಗಾಗಲೇ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ‘ ಸಿಸಿ ಕ್ಯಾಮ್ ‘ ಜತೆಗೆ ‘ಬಾಡಿ ಕ್ಯಾಮ್ ‘ ಧರಿಸಿದ 20 ಮಂದಿ ಪೊಲೀಸರು ನಾಳೆಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಬಾಡಿ ಕ್ಯಾಮ್ ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಉದ್ದೇಶಿಸಿದ್ದು ಅದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ. ಆದ್ದರಿಂದ ಮೈಸೂರಿಗರು ಸಂಚಾರ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸುವಂತೆ ಆಯುಕ್ತರು ಮನವಿ ಮಾಡಿದರು. ಗೋಷ್ಠಿಯ ಒಟ್ಟಾರೆ ಅಂಶ..

ನೂತನ ಸಂಚಾರಿ ದಂಡ ಪಾವತಿ ಮೈಸೂರು ನಗರದಲ್ಲಿ ನಾಳೆಯಿಂದ ಜಾರಿಗೆ. ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದ್ರೆ ಮೊದಲ ಬಾರಿಗೆ 2 ಸಾವಿರ ರೂ, ಎರಡನೇ ಬಾರಿ ಮತ್ತೆ ಉಲ್ಲಂಘನೆ ಮಾಡಿದರೆ 4 ಸಾವಿರ ರೂ. ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ.

ನಿಶಬ್ದ ವಲಯದಲ್ಲಿ ವಾಹನ ಶಬ್ದ ಮಾಡಿದರೆ ಮೊದಲ ಬಾರಿಗೆ ಒಂದು ಸಾವಿರ, ಎರಡನೇ ಬಾರಿಗೆ 2ಸಾವಿರ ರೂ. ದಂಡ.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದ್ರೆ ಒಂದು ಸಾವಿರ ದಂಡ.
ಕಾರ್ ಸೀಟ್ ಬೆಲ್ಟ್ ಧರಿಸದೇ ಇದ್ರೆ ಒಂದು ಸಾವಿರ ದಂಡ.
ನೊಂದಣಿ ಮಾಡಿಸದ ವಾಹನಗಳನ್ನ ಚಾಲನೆ ಮಾಡುವುದಕ್ಕೆ ಮೊದಲ ಬಾರಿಗೆ 5 ಸಾವಿರ ರೂ ಹಾಗೂ ಎರಡನೇ ಬಾರಿ ಉಲ್ಲಂಘನೆ ಮಾಡಿದ್ರೆ ಹತ್ತು ಸಾವಿರ ರೂ. ದಂಡ ಅಥವಾ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ.
ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ಮತ್ತು ವೀಲಿಂಗ್ ಪ್ರಯೋಗ ಮಾಡಿದರೆ, ಮೊದಲ ಬಾರಿಗೆ 5 ಸಾವಿರ ರೂ, 2 ನೇ ಬಾರಿಗೆ ಹತ್ತು ಸಾವಿರ ರೂ. ದಂಡ ಅಥವಾ ಒಂದು ತಿಂಗಳ ಜೈಲುವಾಸ.

ಅನಧಿಕೃತ ವ್ಯಕ್ತಿಗಳಿಗೆ ವಾಹನಗಳನ್ನ ಓಡಿಸಲು ಅವಕಾಶ ನೀಡುವುದು, ಅಥವಾ ಅಪ್ರಾಪ್ತರು ವಾಹನ ಚಲಾವಣೆ ಮಾಡಿದ್ರೆ 5 ಸಾವಿರ ರೂ. ದಂಡ.

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 10 ಸಾವಿರ ರೂ. ದಂಡ ಅಥವಾ 6ತಿಂಗಳು ಜೈಲುವಾಸ, ಮೂರು ವರ್ಷದೊಳಗೆ ಮತ್ತೇ ಉಲ್ಲಂಘನೆ ಮಾಡಿದ್ರೆ l5 ಸಾವಿರ ರೂ. ದಂಡ ಅಥವಾ 2 ವರ್ಷ ಜೈಲು ವಾಸ.

ಸರಕಾರಿ ವಾಹನಕ್ಕೂ ಅನ್ವಯ :
ನೂತನ ಸಂಚಾರಿ ದಂಡ ಸರಕಾರಿ ವಾಹನ ಹಾಗೂ ಜನಪ್ರತಿನಿಧಿಗಳ ವಾಹನಗಳಿಗೂ ಅನ್ವಯವಾಗುತ್ತದೆ. ಸರಕಾರಿ ವಾಹನ ಅಥವಾ ವಿಐಪಿ ವಾಹನ ಎಂದು ಯಾರಿಗೂ ವಿನಾಯ್ತಿ ನೀಡುವ ಪ್ರಶ್ನೆಯೇ ಇಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದ ಯಾವುದೇ ವಾಹನವಾದರು ಸರಿ ದಂಡ ಪಾವತಿಸಿಯೇ ತೀರಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸ್ಪಷ್ಟಪಡಿಸಿದರು.

key words : Mysore : new traffic fines from tomorrow said police commissioner K.T.Balakrishna

Mysore : new traffic fines from tomorrow

Police wearing ‘body cam’ in Mysore city tomorrow will keep an eye on traffic violators.
Twenty policemen wearing ‘body cam’ will be on duty tomorrow, along with ‘CC Cam’, which has already been installed in major circles to keep an eagle’s eye on traffic violators.
The number of body cams is expected to double in the future. therefore the commissioner K.T.Balakrishna requested the Mysoreans to comply with the traffic rules.