ಮಾಸ್ಕ್ ಧರಿಸಿಯೇ ನವಜೋಡಿಗಳ ‘ಪ್ರಿ ವೆಡ್ಡಿಂಗ್ ಶೂಟ್’ : ಸಾಮಾಜಿಕ ಜಾಲತಾಣದಲ್ಲಿ ವೈರಲ್…  

ಮೈಸೂರು,ಮಾ,14,2020(www.justkannada.in):  ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಮದುವೆ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವಜೋಡಿಯೊಂದು ಮಾಸ್ಕ್ ಧರಿಸಿಯೇ ಪ್ರಿವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದು ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯದಲ್ಲೇ ಹಸೆಮಣೆ ಏರಲಿರುವ ನವಜೋಡಿಯೊಂದು  ಮೈಸೂರಿನ ರಾಜ ಬೀದಿಯಲ್ಲಿ ಮಾಸ್ಕ್ ಧರಿಸಿ  ಪ್ರಿವೆಡ್ಡಿಂಗ್ ಶೂಟಿಂಗ್ ಮಾಡಿಸಿಕೊಂಡಿದೆ. ಈ ನವಜೋಡಿಯ ಪ್ರಿವೆಡ್ಡಿಂಗ್ ಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ನವಜೋಡಿಗಳು ಸರ್ಕಾರವನ್ನು ಟೀಕಿಸಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.mysore- New Jodi- Pre-Wedding- Shoot –with- Masks- Viral

ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಒಂದು ವಾರಗಳ ಕಾಲ ಮದುವೆ ಸಮಾರಂಭ ನಿಶ್ಚಿತಾರ್ಥ, ಸಭೆ ಸಮಾರಂಭ, ಸಿನಿಮಾ ಥೀಯೇಟರ್ ಶಾಲಾ ಕಾಲೇಜುಗಳನ್ನ ಬಂದ್ ಮಾಡಿದೆ. ಈ ಮಧ್ಯೆ ಈ ನವಜೋಡಿಯ ಪ್ರಿವೆಡ್ಡಿಂಗ್ ಶೂಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Key words: mysore- New Jodi- Pre-Wedding- Shoot –with- Masks- Viral