ಮೈಸೂರಿಗೆ ಮೂರನೇ ಮಹಾರಾಣಿ ಬೇಡ..! ಶಾಸಕ ಹೆಚ್.ಪಿ ಮಂಜುನಾಥ್  ಹೀಗೆ ಹೇಳಿದ್ದು ಯಾರಿಗೆ ಗೊತ್ತೆ…?

Promotion

ಮೈಸೂರು,ನವೆಂಬರ್,24,2020(www.justkannada.in):  ಮೈಸೂರಿಗೆ ಮೂರನೇ ಮಹಾರಾಣಿ ಬೇಡ. ಈಗಾಗಲೇ ಮೈಸೂರಿಗೆ ಇಬ್ಬರು ಮಹರಾಣಿಯರಿದ್ದಾರೆ. ಪ್ರಮೋದಾದೇವಿ, ತ್ರಿಶಿಖಾ ಇದ್ದಾರೆ ಸಾಕು. ನೀವು ಮಹಾರಾಣಿಯಾಗಿ ಮೆರೆಯಬೇಡಿ. ಹೀಗೆ ಹುಣಸೂರು ಶಾಸಕ ಹೆಚ್. ಪಿ ಮಂಜುನಾಥ್ ಕಿಡಿಕಾರಿದ್ದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ…I didn't knew CM BSY will think so cheaply - KPCC President D.K. Shivakumar

ಹೌದು ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಯಾವುದಕ್ಕೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಅವರು ಅವರದ್ದೇ ಆದ ಭ್ರಮಾ ಲೋಕದಲ್ಲಿದ್ದಾರೆ. ತ್ರೈಮಾಸಿಕ ಸಭೆ ಇರುವುದು ನಾವು ಕ್ಷೇತ್ರದ ಸಮಸ್ಯೆ ಬಗೆಹರಿಸಿಕೊಳ್ಳಲು. ಇಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.ಆದರೆ ಈ ಬಾರಿ ಹಾಗೆ ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.mysore-need-no-third-queen-hunsur-mp-manjunath

ಅಧಿಕಾರಿಯಾಗಿ ಜನರ ಸಮಸ್ಯೆಗೆ ಸ್ಪಂದನೆ ಮಾಡಿ ಎಂದು ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡಿದ ಹೆಚ್.ಪಿ ಮಂಜುನಾಥ್,  ರೋಹಿಣಿ ಸಿಂಧೂರಿ ಅವರು ತಮ್ಮನ್ನು ಏನು ಅಂತ ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಸಭೆಯಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೇ ಪ್ರೋಟೋಕಾಲ್ ಮಿಸ್ ಆಗಿದೆ ಎಂದು ಕಿಡಿಕಾರಿದರು.

Key words: Mysore -need -no -third queen –hunsur-MP Manjunath