ಮೈಸೂರಿನಲ್ಲಿ “ ಮಾತು ಹಾಗೂ ಧ್ವನಿಯ ವಿಶ್ಲೇಷಣೆ ” ಕುರಿತ ರಾಷ್ಟ್ರೀಯ ಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿದ ಐಶ್ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ….

ಮೈಸೂರು,ಜೂ,28,2019(www.justkannada.in):  ಮಾತು ಹಾಗು ಧ್ವನಿ ವಿಶ್ಲೇಷಣೆ  ಕುರಿತು ಮೈಸೂರಿನ ಜೆಎಸ್ ಎಸ್ ಮತ್ತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.

ನಗರದ ಎಂಜಿ ರಸ್ತೆಯಲ್ಲಿರುವ, ಜೆ.ಎಸ್.ಎಸ್. ರಾಜೇಂದ್ರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತು ಹಾಗು ಧ್ವನಿ ವಿಶ್ಲೇಷಣೆ ಕಾರ್ಯಗಾರವನ್ನ  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಇದೊಂದು ಪ್ರಯೋಗಾತ್ಮಕ ಕಾರ್ಯಗಾರವಾಗಿದೆ. ಎರಡು ದಿನ ನಡೆಯುವ ಈ ಕಾರ್ಯಗಾರದಲ್ಲಿ ಕಂಪ್ಯೂಟರ್ ಹಾಗೂ ಸಲಕರಣೆಗಳ ಸಹಾಯದಿಂದ ಮಾತು ಹಾಗು ಧ್ವನಿ ವಿಶ್ಲೇಷಣೆಯ ಬಗ್ಗೆ ತರಬೇತಿ ನೀಡಲಾಗುವುದು. ಇದು ಮಾತು ಮತ್ತು ಧ್ವನಿ ದೋಷಗಳನ್ನು ಪತ್ತೆ ಹಚ್ಚಲು ಹಾಗೂ ಸರಿಪಡಿಸಲು ಉಪಯೋಗಿಸುವ ರೀತಿಗಳ ಬಗ್ಗೆ ತರಬೇತಿಯಾಗಿದೆ ಎಂದರು.

ಕಾರ್ಯಗಾರಕ್ಕೆ ದೇಶದ ವಿವಿಧೆಡೆಯಿಂದ 100 ಮಂದಿ ತಜ್ಞರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೊ . ಆರ್ . ರಂಗಸಾಯಿ ,ಆರ್ . ಮಹೇಶ್ , ನಟರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು,

Key words: mysore-National level –workshop-speech and voice- analysis-AIISH-Director- Prof. M. Pushpawathi.