ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ ; ಇಂದಿನಿಂದ ಔಷಧಿ ಉತ್ಪಾದನೆ ಆರಂಭ.

 

ಮೈಸೂರು, ಮೇ 25, 2020 : (www.justkannada.in news ) ಕೊರೊನಾ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳು ಲಾಕ್ ಡೌನ್ ಆಗಿದ್ದ ನಂಜನಗೂಡಿನ ಜ್ಯುಬಿಲಿಯಂಟ್ ಫ್ಯಾಕ್ಟರಿ ಇಂದಿನಿಂದ ಮತ್ತೆ ಕಾರ್ಯರಂಭ ಶುರು ಮಾಡಿದೆ.

ಕೊರೊನಾಕ್ಕಾಗಿ ರೆಮ್ಡಿಸಿವಿರ್ ಔಷಧಿ ಉತ್ಪಾದಿಸಲು ಅನುಮತಿ ಕೇಳಿದ್ದ ಕಾರ್ಖಾನೆ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈಗ ಮತ್ತೆ ಕಾರ್ಯರಂಭ ಮಾಡಿದೆ. 10 ಗ್ರಾಮಗಳ ದತ್ತು, 50 ಸಾವಿರ ಕಿಟ್, ಭವಿಷ್ಯದಲ್ಲಿ ದೋಷ ಎಸಗಲ್ಲ ಎಂಬ ಷರತ್ತುಗಳಿಗೆ ಕಂಪನಿ ಒಪ್ಪಿಗೆ ಸೂಚಿಸಿದೆ.

74 ಕಾರ್ಮಿಕರು ಕರೊನಾ ಪಾಸಿಟಿವ್ ಆಗಿದ್ದರು. ಇನ್ನೂ ಪತ್ತೆಯಾಗದ ಸೋಂಕಿನ ಮೂಲ.ಅಪೂರ್ಣ ವರದಿ ನೀಡಿದ್ದ ಐಎಎಸ್​ ಅಧಿಕಾರಿ ಹರ್ಷಗುಪ್ತ. ಇದು ಜುಬಿಲಿಯಂಟ್ ಫ್ಯಾಕ್ಟರಿಯಲ್ಲಿ ಪತ್ತೆಯಾದ ಕರೋನಾ ಕೇಸ್ ಗೆ ಸಂಬಂಧಿಸಿದ ಕೆಲ ಪ್ರಮುಖ ಘಟನಾವಳಿಗಳು.

mysore-nanjangudu-jubeliant-factory-re.open-corona-covid.19

ತಲ್ಲಣ ಮೂಡಿಸಿದ್ದ ಜುಬಿಲಿಯಂಟ್ ಓಪನ್ :

ಬರೋಬ್ಬರಿ 60 ದಿನಗಳ ನಂತರ ಬಾಗಿಲು ತೆರೆದ ಕಾರ್ಖಾನೆ. ಕಾರ್ಖಾನೆಯ ಶೇಕಡ 25ರಷ್ಡು ನೌಕರರು ಹಾಜರ್. ಗೇಟ್ ಮುಂಭಾಗದಲ್ಲೇ ಎಲ್ಲಾ ನೌಕರರ ತಪಾಸಣೆ. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಸಿಂಪಡಣೆ. ಪಿಪಿಇ ಕಿಟ್ ಬಳಸಿ ನೌಕರರ ತಪಾಣೆಗೆ ಮುಂದಾದ ಕಾರ್ಖಾನೆ. ಕಾರ್ಖಾನೆ ಒಳ ಪ್ರವೇಶಕ್ಕೆ ಎಲ್ಲರ ಕೋವಿಡ್ ಟೆಸ್ಟ್ ವರದಿ ಕಡ್ಡಾಯ. ಕಾರ್ಖಾನೆ ಮುಂದೆ ಜಮಾಯಿಸಿದ 200ಕ್ಕೂ ಅಧಿಕ ನೌಕರರು.

ಹತ್ತಿರ ಸೇರುತ್ತಿರಲಿಲ್ಲ, ಕಂಡರೆ ಓಡುತ್ತಿದ್ದರು.

mysore-nanjangudu-jubeliant-factory-re.open-corona-covid.19

ಕ್ವಾರಂಟೈನ್ ನಲ್ಲಿದ್ದ ಜುಬಿಲಿಯಂಟ್ ಕಾರ್ಖಾನೆ ನೌಕರನ ನೋವಿನ ಮಾತು. ವಿವಾಹ ವಾರ್ಷಿಕೋತ್ಸವದ ಸವಿ ಘಳಿಗೆಯನ್ನು ದುಖಃವಾಗಿಸಿದ ಜನ. ಜುಬಿಲಿಯಂಟ್ ಕಾರ್ಖಾನೆ ನೌಕರನ ಅಳಲು. ನಂಜನಗೂಡು ತಾಲ್ಲೂಕಿನ ತೊರೆಮಾವು ಗ್ರಾಮದ ನೌಕರ. ಮೇ 23 ನಡೆದ ವಿವಾಹ ವಾರ್ಷಿಕೋತ್ಸವ ಸಮಾರಂಭ. ಅಡುಗೆ ಮಾಡಿ ಊಟಕ್ಕೆ ಕರೆದರೂ ಯಾರೂ ಬರಲಿಲ್ಲ. ನನ್ನನ್ನ ನೋಡಿದ ತಕ್ಷಣ ಓಡುತ್ತಿದ್ದರು ಜನ. ನಮ್ಮನ್ನ ಏನೋ ಒಂದು ರೀತಿ ನೋಡುತ್ತಿದ್ದರು. 60 ದಿನ ನರಕ ಯಾತನೆ ಅನುಭವಿಸಿದ ಕಂಪನಿ ನೌಕರ. 30 ದಿನ ನಮ್ಮನ್ನ ಮನೆಯಿಂದ ಹೊರಗೇ ಬಿಡಲಿಲ್ಲ. ಕಷ್ಟದಲ್ಲಿ ನೆರವಿಗೆ ಬರಬೇಕಾದ ಜನ ಈಗೇಕೆ ಮಾಡಿದರು ಎಂಬುದೇ ದುಖಃವಾಗಿದೆ.

 

key words : Mysore-nanjangudu-jubilant-factory-re.open-corona-covid.19