ರಸ್ತೆಯಲ್ಲಿನ ಹಳ್ಳದಿಂದ ಜಂಪ್ ಹೊಡೆದು ಮೋರಿಗೆ ಬಿದ್ದ ಬೈಕ್: ಸವಾರ ಸ್ಥಳದಲ್ಲೇ ಸಾವು…

ಮೈಸೂರು,ನವೆಂಬರ್ ,3,2020(www.justkannada.in): ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಹಿನ್ನೆಲೆ ಬೈಕ್ ರಸ್ತೆಯಲ್ಲಿನ ಹಳ್ಳದಿಂದ ಜಂಪ್ ಹೊಡೆದು ಮೋರಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ. jk-logo-justkannada-logo

ತಡರಾತ್ರಿ ನಂಜನಗೂಡಿನ ಬಸ್ ನಿಲ್ದಾಣದ ಮುಂಭಾಗ ಈ ಘಟನೆ ನಡೆದಿದೆ. ಬೈಕ್ ಸವಾರ ಅತಿವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ರಸ್ತೆಯಲ್ಲಿನ ಹಳ್ಳದಿಂದ ಬೈಕ್ ಜಂಪ್ ಹೊಡೆದು ಮೋರಿಗೆ ಬಿದ್ದಿದ್ದು, ಬೈಕ್ ಬಿದ್ದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.mysore-nanjanagud-bike-jumped-fell-died-on-the-spot

KA 11′ E 2319 ನಂಬರ್ ನ ಬೈಕ್  ಸಾವನ್ನಪ್ಪಿದ್ದು, ಮೃತ ವ್ಯಕ್ತಿಯ ಚಹರೆ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇನ್ನು ಬೈಕ್ ಸವಾರ ಕುಡಿದು ಚಾಲನೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಕುರಿತು ನಂಜನಗೂಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-nanjanagud-  bike -jumped – fell-died -on the spot.