ರಾಜಕಾಲುವೆ ಒತ್ತುವರಿ ಸರ್ವೆ : ಕೇವಲ ಸಾರಾ ಚೌಲ್ಟ್ರಿ ಬಳಿ ಮಾತ್ರ ಯಾಕೆ, ಆರಂಭದಿಂದ ಅಂತ್ಯದವರೆಗೂ ನಡೆಸಿ.

Promotion

ಮೈಸೂರು, ಜೂ.14, 2021 : (www.justkannada.in news) : ರಾಜಕಾಲುವೆ ಒತ್ತುವರಿ ವಿಚಾರಣೆಯನ್ನು ಕೇವಲ ದಟ್ಟಗಳ್ಳಿಯ ‘ ಸಾರಾ ಕಲ್ಯಾಣ ಮಂಟಪ’ ದ ಬಳಿ ಮಾತ್ರ ಮಾಡದೇ ರಾಜಕಾಲುವೆಯ ಆರಂಭದಿಂದ ಹಿಡಿದು ಅಂತ್ಯದವರೆಗೂ ನಡೆಸಬೇಕು ಎಂದು ಮಾಜಿ ಮೇಯರ್ ಒತ್ತಾಯಿಸಿದ್ದಾರೆ.jk
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ ಎಲ್ ಭೈರಪ್ಪ ಹೇಳಿದಿಷ್ಟು…
ಶಾಸಕ ಸಾ ರಾ ಮಹೇಶ್ ವಿಚಾರವನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತೀರಾ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಬಹುತೇಕ ಕಡೆ ನಡೆದಿರುವ ಭೂ ಒತ್ತುವರಿ, ಕಬಳಿಕೆಯತ್ತ ಗಮನ ನೀಡದೆ, ಕೇವಲ ಸಾರಾ ಮಹೇಶ್ ಅವರ ಕಲ್ಯಾಣಮಂಟಪದತ್ತ ಗಮನ ನೀಡಿದ್ದೂ ಸಹ ವೈಯಕ್ತಿಕ ಹಿತಾಸಕ್ತಿ. ಈ ಸಂಬಂಧವಾಗಿ ರೋಹಿಣಿ ಸಿಂಧೂರಿ ಹಾದಿರಂಪ ಬೀದಿ ರಂಪ ಮಾಡಿದ್ದು ಸರಿಯಲ್ಲ. ರಾಜಕಾಲುವೆ ಒತ್ತುವರಿ ವಿಚಾರಣೆಯನ್ನು ಕೇವಲ ದಟ್ಟಗಳ್ಳಿಯ ‘ ಸಾರಾ ಕಲ್ಯಾಣ ಮಂಟಪ’ ದ ಬಳಿ ಮಾತ್ರ ಮಾಡದೇ ರಾಜಕಾಲುವೆಯ ಆರಂಭದಿಂದ ಹಿಡಿದು ಅಂತ್ಯದವರೆಗೂ ನಡೆಸಬೇಕು ಎಂದು ಒತ್ತಾಯಿಸಿದರು.
ಮುಡಾ ಸಭೆಯಲ್ಲಿ 500ಕ್ಕೂ ಹೆಚ್ಚು ನಿರ್ಣಯಗಳನ್ನು ಕೈಗೊಂಡಿರುವುದರ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ರೋಹಿಣಿ ಸಿಂಧೂರಿಯವರು ನಿಯಮಬಾಹಿರವಾಗಿ ‌ನಡೆದುಕೊಂಡಿದ್ದಾರೆ. ಮುಡಾದಲ್ಲಿ ಸರ್ವ ಸದಸ್ಯರು ತೆಗದುಕೊಳ್ಳುವ ತೀರ್ಮಾನವನ್ನು ಅಧ್ಯಕ್ಷರು ಅನುಮೋದಿಸುತ್ತಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಮುಡಾ ಅಧ್ಯಕ್ಷರಿಗೆ ಅಧಿಕಾರವಿಲ್ಲ. ಮುಡಾದಲ್ಲಿ ನಡೆದ ಸಭೆಗಳಿಗೆ ರೋಹಿಣಿ ಸಿಂಧೂರಿ ಭಾಗಿಯಾಗಿಲ್ಲ.

ENGLISH SUMMARY…

Survey of drain water canal: Why only near Sa Ra Choultry, conduct survey from starting to end
Mysuru, June 14, 2021 (www.justkannada.in): Former Mayor B.L. Byrappa today demanded the authorities concerned to conduct a detailed survey of the alleged illegal government land encroachment case in Mysuru, instead of probing only the land located near the Sa Ra Kalyana Mantapa in Dattagalli.
Addressing a press meet in Mysuru today he said, “Former Deputy Commissioner of Mysuru Rohini Sindhuri has taken MLA Sa. Ra. Mahesh’s case personally. Instead of focusing on the illegal land encroachment that has taken place in several places, focusing just on the land located near the convention hall constructed by MLA Sa. Ra. Mahesh itself shows her vendetta. It is not correct on her part to do so. The case should not be limited just to the land located near the Sa. Ra. Convention hall, instead a detailed investigation should be conducted from the starting point of the drain water canal till the end of it,” he demanded.
Further, he alleged that “Request for an investigation on more than 500 decisions taken during the MUDA meeting is made. Thus Rohini Sindhuri’s move is illegal. The MUDA Chairman has approved the decision taken by all the members of MUDA. The MUDA Chairman doesn’t have any power to take a one-sided decision. Rohini Sindhuri has not taken part in the MUDA meetings,” he added..

key words : mysore-muda-mayor-rohini-sindhoori-jds