ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ.?  ನಾಳಿನ ಬಂದ್ ಕುರಿತು ಸಂಸದ ಪ್ರತಾಪ್ ಸಿಂಹ ಕಿಡಿ….

ಮೈಸೂರು,ಸೆಪ್ಟಂಬರ್,27,2020(www.justkannada.in):  ರೈತಪರ ಕಾಯ್ದೆ ಜಾರಿ ಮಾಡಿದ್ರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡ್ತಿವಿ. ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ. ರೈತರಿಗೆ ಅನುಕೂಲವಾಗಲೆಂದು ಕಾಯ್ದೆ ಜಾರಿಗೆ ತರಲಾಗುತ್ತಿದೆ. ಹೀಗಾಗಿ ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ.? ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ರೈತ ಪರ ಕಾಯ್ದೆ ಜಾರಿ ಮಾಡಿದ್ರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ  ಮಾಡುತ್ತೇವೆ. ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ. ಆಗಾದರೇ ನಾವು ರೈತನಿಗೆ ಮತ್ತು ಗ್ರಾಹಕನಿಗೆ ಲಾಭವಿಲ್ಲದ ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ.?  ಎಂದು ಪ್ರಶ್ನಿಸಿದರು.

ಎಪಿಎಂಸಿ ಚುನಾವಣೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ. ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ.? ರೈತರಿಂದಲೇ ಸೆಸ್ಕ್  ಸುಲಿಗೆ ಮಾಡಿ ಲಾಭ ಮಾಡುತ್ತಿರುವುದು ದಳ್ಳಾಳಿಗಳು. ಸೂಪರ್ ಮಾರ್ಕೆಟ್ ಒಳಗೆ ಬಿಟ್ಟುಕೊಂಡಿದ್ದು ಯಾರು.  ಈಗ ಅವರೇ ರೈತರ ಬಳಿ ಪದರ್ಥ ಖರೀದಿ ಮಾಡ್ತಾರೆ ಅದರಲ್ಲಿ ತಪ್ಪೇನು. ವಿರೋಧ ಮಾಡುವುದಿದ್ದರೇ ಸೂಪರ್ ಮಾರ್ಕೆಟ್‍ಗಳನ್ನೆ ವಿರೋಧ ಮಾಡಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.mysore-mp-prathap-simha-karnataka-bandh-farmer

ಹಾಗೆಯೇ ನಾಳಿನ ಬಂದ್ ನಲ್ಲಿ ರೈತರು ಭಾಗಿಯಾಗ್ತಿಲ್ಲ. ಆದ್ರೆ ರೈತರ ಹೆಸರಿನ ಸಂಘಟನೆಗಳು ಭಾಗಿಯಾಗ್ತಿವೆ.  ಈ ಬಂದ್‍ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪ್ರತಾಪ್ ಸಿಂಹ ನುಡಿದರು.

ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರಿಯ ಯುವಮೋರ್ಚ ಅಧ್ಯಕ್ಷರಾಗಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಇದು ಕರ್ನಾಟಕ್ಕ ಸಿಕ್ಕ ಅತಿದೊಡ್ಡ ಮನ್ನಣೆಯಾಗಿದೆ. ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು ಪ್ರೀತಿ ಹೊಂದಿದೆ. ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನ ಬಿಂಬಿಸುತ್ತದೆ. ಸಿ.ಟಿ.ರವಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೂ ಅಭಿನಂದನೆಗಳು. ತೇಜಸ್ವಿಸೂರ್ಯಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Key words: mysore- MP-Prathap simha-karnataka bandh-farmer