ಮೈಸೂರು ಜಿಲ್ಲೆಯ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಮೈಸೂರು ನಗರದ್ದೇ ಸಿಂಹಪಾಲು: ತಾಲ್ಲೂಕುವಾರು ಪಟ್ಟಿ ಇಲ್ಲಿದೆ ನೋಡಿ…

ಮೈಸೂರು,ಆ,1,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,  ಮೈಸೂರು ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ನಗರವೇ ಟಾಪ್ ನಲ್ಲಿದೆ.jk-logo-justkannada-logo

ಹೌದು ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳಿಂಗಿಂತಲೂ ನಗರ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ.  ಈವರೆಗೆ ಮೈಸೂರು ನಗರದಲ್ಲಿ 3613 ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು ಈ ಪೈಕಿ ಸಕ್ರಿಯ ಪ್ರಕರಣಗಳು 2315  ಹಾಗೂ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರು 1171  ಮಂದಿ. ಈ ಮೂಲಕ ಮೈಸೂರು ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಮೈಸೂರು ನಗರದ್ದೇ ಸಿಂಹಪಾಲಿದೆ.

ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಶೇ 90 ರಷ್ಟು ಪ್ರಕರಣಗಳು  ಮೈಸೂರು ನಗರದಲ್ಲೇ ಕಂಡು ಬಂದಿದೆ. ಇನ್ನು  ಸಾವಿನ ಸಂಖ್ಯೆಯಲ್ಲೂ ಮೈಸೂರು ನಗರವೇ ಮುಂದಿದೆ. ಜಿಲ್ಲೆಯ ಒಟ್ಟು 142 ಸಾವಿನಲ್ಲಿ ನಗರದಲ್ಲೇ 127 ಜನ ಸೊಂಕೀತರನ್ನ  ಕೊರೋನಾ ಮಹಾಮಾರಿ ಬಲಿ ಪಡೆದಿದೆ.mysore- Most -corona virus-city-taluk

ಉಳಿದಂತೆ ಹೆಚ್ ಡಿ ಕೋಟೆಯಲ್ಲಿ 61, ಹುಣಸೂರು81, ಕೆ. ಆರ್ ನಗರ 66, ಮೈಸೂರು ತಾಲ್ಲೂಕು 88, ನಂಜನಗೂಡು 164, ನಂಜನಗೂಡು ಗ್ರಾಮೀಣ 11, ಪಿರಿಯಾಪಟ್ಟಣ 18, ಟಿ.ನರಸೀಪುರದಲ್ಲಿ 115 ಕೊರೋನಾ ಪ್ರಕರಣಗಳು ದಾಖಲಾಗಿವೆ.

Key words: mysore- Most -corona virus-city-taluk