ಎಲೆಕ್ಟಿಕಲ್ ವಾಹನಗಳಿಗೆ ಚಾಲನೆ: ಶಾಸಕ ಎಸ್.ಎ ರಾಮದಾಸ್ ಹೊಗಳಿದ ಕೇಂದ್ರ ಸಚಿವ ಭಗವಂತ ಖೂಬಾ

ಮೈಸೂರು,ಅಕ್ಟೋಬರ್,1,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪಾಲ್ಗೊಂಡು ಶಾಸಕ ಎಸ್.ಎ ರಾಮದಾಸ್ ಅವರನ್ನ ಹೊಗಳಿದರು.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದಲ್ಲಿ  ಸೂರ್ಯ ಪಥ್ ಯೋಜನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ಸೋಲಾರ್ , ಎಲೆಕ್ಟ್ರಾನಿಕ್, ಎಲೆಕ್ಟಿಕಲ್ ವಾಹನಗಳಿಗೆ ಚಾಲನೆ ದೊರೆಯಿತು. ಕೆ.ಆರ್ ಕ್ಷೇತ್ರದ 5 ಸಾವಿರ ಮನೆಗೆಳಿಗೆ ಸೋಲಾರ್ ಪ್ಯಾನಲ್ ಮುಖಾಂತರ ಸೊಲಾರ್ ಬೆಳಕು ನೀಡುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಕಸ ಎಸ್ ಎ ರಾಮದಾಸ್ ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಮದಾಸ್  ಅವರು ಕೇಂದ್ರ ಹಾಗೂ ರಾಜ್ಯಸರ್ಕಾರದ ಯೋಜನೆಗಳನ್ನ ಮನೆ‌ಮನೆಗೆ ತಲುಪಿಸುತ್ತಿರುವುದಕ್ಕೆ ರಾಮದಾಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಮದಾಸ್ ರಂತಹ ಜನಪ್ರತಿನಿಧಿಯ ಅವಶ್ಯಕತೆ ಇದೆ. ಅವರು ಒಬ್ಬ ಮಾದರಿ ಶಾಸಕರಾಗಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ರನ್ನು ಹೊಗಳಿದರು.

ನರೆಂದ್ರ ಮೋದಿ ಪ್ರಧಾನಿ ಆದ ಬಳಿಕ ಅತೀ ವೇಗದಲ್ಲಿ ಅಭಿವೃದ್ಧಿ ಆಗಿದೆ. ನವೀಕೃತ ಶಕ್ತಿ ಮೂಲಕ ಕರೆಂಟ್ ಉತ್ಪಾದನೆ‌ಮಾಡುಬೇಕು. 174 ಗಿಗಾ ವ್ಯಾಟ್ ನವೀಕರಣ ವಿದ್ಯುತ್ ತಯಾರು ಮಾಡುವ ಗುರಿ ಇದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಒತ್ತು ಕೊಡುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನ ವಿದ್ಯುತ್ ಬೆಲ ಕಡಿಮೆ ಆಗುವ ಸಾಧ್ಯತೆ ಇದೆ. ವಿದ್ಯುತ್  ಅಗತ್ಯ ಮಟ್ಟದಲ್ಲಿ ಉತ್ಪಾದನೆ ಆಗುತ್ತಿದೆ. ಕಳೆದ ಏಳು ವರ್ಷಗಳಿಂದ ಎಲ್ಲರಿಗೂ ನಮ್ಮ ಮನೆ ಹಾಗೂ ಹೊಲಗಳಲ್ಲಿ ವಿದ್ಯುತ್ ಕಡಿತ ಇಲ್ಲ ಎಂಬ ಭಾವನ ಜನರಿಗೆ ಬಂದಿದೆ. ಕೇಂದ್ರ ಸರ್ಕಾರ, ಪ್ರಧಾನಿ‌ ಮೋದಿ ದೊಡ್ಡ ದೊಡ್ಡ ಯೋಜನೆ ಹಮ್ಮಿಕೊಂಡಿದ್ದಾರೆ ಎಂದು ಭಗವಂತ ಖೂಬಾ ತಿಳಿಸಿದರು.

ಇಂದ‌ನ ಬೆಲೆ ಹೆಚ್ಚಾಗಲು ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ. ಎರಡು ಲಕ್ಷ ಕೋಟಿ ಆಯಿಲ್ ಬಾಂಡ್ ಗಳ ಸಾಲ ಮಾಡಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಆ ಸಾಲವನ್ನ ತೀರಿಸಿದ್ದಾರೆ. ಅವರು ಹಿಂದೆ ಇದ್ದ ಬೆಲೆ ಎಷ್ಟು ಹೆಚ್ಚು ಮಾಡುದ್ರು ಅದರಲ್ಲಿ 40 ರಷ್ಟು ಮಾತ್ರ ಏರಿಕೆ ಆಗಿದೆ. ದೇಶ ಅಭಿವೃದ್ಧಿ ಕಾರ್ಯ ಒತ್ತು ನೀಡಿದೆ. ಇದರಿಂದ ಅಲ್ಪ ಬೆಲೆ ಏರಿಕೆಯನ್ನ ಜನ ಒಪ್ಪಿಕೊಂಡಿದ್ದಾರೆ ಎಂದು ಭಗವಂತ ಖೂಬಾ ತಿಳಿಸಿದರು.

Key words: mysore- modi yug utsav-  Union Minister –bhagavantha khooba-praised- MLA- SA Ramadas