ಮಂಡ್ಯ ಲೋಕಸಭಾ ಚುನಾವಣೆ ಕುರಿತ ‘ಮತಭಿಕ್ಷೆ’ ಕೃತಿ ಬಿಡುಗಡೆ ಮಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್…

ಮೈಸೂರು,ಅಕ್ಟೋಬರ್,21,2020(www.justkannada.in): ಮಂಡ್ಯ ಲೋಕಸಭಾ ಚುನಾವಣಾ ವಿಷಯಗಳ ಕುರಿತಾಗಿ ‘ಐತಿಚಂಡ ರಮೇಶ್’ ಅವರು ಹೊರತಂದಿರುವ ‘ಮತಭಿಕ್ಷೆ’ ಕೃತಿಯನ್ನು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬಿಡುಗಡೆ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಎಂಎಲ್ ಸಿ ಹೆಚ್.ವಿಶ್ವನಾಥ್ ‘ಮತಭಿಕ್ಷೆ’ ಕೃತಿ ಬಿಡುಗಡೆ ಮಾಡಿದರು. ಐತಿಚಂಡ ರಮೇಶ್  ಅವರು ಮಂಡ್ಯ ಲೋಕಸಭಾ ಚುನಾವಣೆ ಸಮಯದಲ್ಲಿ ಸ್ಥಳಕ್ಕೆ ತೆರಳಿ ವರದಿ ಮಾಡಿದ್ದ ಅನುಭವವನ್ನ ಪುಸ್ತಕ ರೀತಿಯಾಗಿ ಹೊರ ತಂದಿದ್ದಾರೆ. ಈ ಮತಭಿಕ್ಷೆ ಕೃತಿಯಲ್ಲಿ ಮಂಡ್ಯ ಲೋಕಸಭಾ ಚುನಾವಣಾ ಕಣದ ಒಳ ಹೊರಗಿನ ಚಿತ್ರಣ, ಅಭ್ಯರ್ಥಿಗಳ ಆರೋಪ ಪ್ರತ್ಯಾರೋಪ, ವಿವಾದದ ಹೇಳಿಕೆಗಳು ಮುಂತಾದ ಮಾಹಿತಿಗಳನ್ನೊಳಗೊಂಡಿದೆ.jk-logo-justkannada-logo

ಕೃತಿ ಬಿಡುಗಡೆ ಸಮಾರಂಭದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪತ್ರಕರ್ತ ಹಾಗೂ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಸೇರಿದಂತೆ ಇನ್ನಿತರ ಗಣ್ಯರ ಉಪಸ್ಥಿತರಿದ್ದರು.

ಕೃತಿ ಬಿಡುಗಡೆ ಬಳಿಕ ಮಾತನಾಡಿದ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಂಡ್ಯ ಲೋಕಸಭಾ ಚುನಾವಣೆ ದೇಶದಲ್ಲೇ ಪ್ರತಿಷ್ಠೆಯ ಕಣವಾಗಿತ್ತು. ಪ್ರತಿಷ್ಠೆ ಹಾಗೂ ಸ್ವಾಭಿಮಾನದ ನಡುವೆ ನಡೆದಿದ್ದ ಚುನಾವಣೆ ಅದಾಗಿತ್ತು. ಚುನಾವಣಾ ಸಂದರ್ಭದಲ್ಲಿ ಕೆಲ ನಾಯಕರ ಹೇಳಿಕೆಗಳು ಸಾಕಷ್ಟು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಸುಮಲತಾ ಅವರನ್ನು ಮಾಯಾಂಗನೆ, ಆಕೆ ಮಂಡ್ಯದ ಗೌಡ್ತಿಯೇ ಅಲ್ಲವೆಂಬ ಕೆಲ ಹೇಳಿಕೆಗಳಿಗೆ ಕುಮಾರಸ್ವಾಮಿಯವರು ಭಾರಿ ಬೆಲೆಯನ್ನೇ ತೆರಬೇಕಾಯಿತು. ಗೌಡರ ಕೋಟೆಯನ್ನು ಯಾರು ಭೇದಿಸಲಾಗದು ಎಂಬ ಭ್ರಮೆಯಲ್ಲಿದ್ದವರಿಗೆ ಸ್ವಾಭಿಮಾನ ಎಂಬ ಅಸ್ತ್ರ ಭೇದಿಸಿತು. ಸೇರಗೊಡ್ಡಿ ಬೇಡಿದ ಸುಮಲತಾಗೆ ಮಂಡ್ಯ ಜನ ಮತಭಿಕ್ಷೆ ನೀಡಿದ ಪರಿ ದೇಶದಲ್ಲಿ ಸಂಚಲನ ಉಂಟು ಮಾಡಿದ್ದು ರೋಮಾಂಚನವಾಗಿತ್ತು ಎಂದು ಹೇಳಿದರು.

ಐತಿಚಂಡ ರಮೇಶ್ ಉತ್ತಪ್ಪ ಅವರು ಮಂಡ್ಯ ಲೋಕಸಭಾ ಚುನಾವಣಾ ಒಳ ಹೊರಗಿನ ಸ್ಪಷ್ಟ ಚಿತ್ರಣಗಳು ಸೇರಿದಂತೆ ಇಡೀ ಚುನಾವಣೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಶಿವಾನಂದ ತಗಡೂರು ತಿಳಿಸಿದರು.

Key words: mysore- MLC -H. Vishwanath-released –mathabhikse-book-ithichanda ramesh