ದಶಪಥ ಯೋಜನೆಯ ಕ್ರೆಡಿಟ್ ವಾರ್ ಮತ್ತು ಸ್ವಪಕ್ಷದ ವಿರುದ್ಧವೇ ಹೆಚ್.ವಿಶ್ವನಾಥ್ ಟೀಕೆ ಬಗ್ಗೆ ಶಾಸಕ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ.

ಮೈಸೂರು,ಆಗಸ್ಟ್,23,2021(www.justkannada.in): ದಶಪಥ ಯೋಜನೆ ಯಾರದ್ಧು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮತ್ತು ಎಂಎಲ್ ಸಿ ಹೆಚ್.ವಿಶ್ವನಾಥ್ ನಡುವೆ ಯೋಜನೆಯ ಕ್ರೆಡಿಟ್ ವಾರ್ ನಡೆದಿತ್ತು. ಈ ಕುರಿತು ಮಾತನಾಡಿ ಟಾಂಗ್ ನೀಡಿರುವ ಶಾಸಕ ಎಸ್.ಎ ರಾಮದಾಸ್,    ಇದು ಯಾರಿಗು ಸೇರಿದ ಕ್ರೆಡಿಟ್ ಅಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್‌ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಎಸ್.ಎ ರಾಮದಾಸ್,  ಜನರ ತೆರಿಗೆ ಹಣದಲ್ಲಿ ‌ನಿರ್ಮಾಣವಾಗುತ್ತಿರುವ ರಸ್ತೆ ಇದು. ಇದು ನಾನು ಮಾಡಿದ್ದು, ನಾನು ಮಾಡಿದ್ದು ಎನ್ನುವುದು ಸರಿಯಲ್ಲ.ಇದು ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ. ನನ್ನ ಕ್ಷೇತ್ರದಲ್ಲು ನಾನು ರಸ್ತೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ ಅದರ ಕ್ರೆಡಿಟ್ ನನ್ನದಲ್ಲ, ಎಲ್ಲಾ ಇಲಾಖೆ ವ್ಯವಸ್ಥೆಗೆ ಸೇರಿದ್ದು. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲು ಅದು ಎಲ್ಲರಿಗು ಸೇರಿದ್ದು ಎಂದು ಹೇಳಿದರು.

ಬಿಜೆಪಿ ಜನಾಶಿರ್ವಾದ ಯಾತ್ರೆಯಿಂದ ಕೊರೊನಾ ಆತಂಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ನಮ್ಮ ಯಾತ್ರೆಯಿಂದ ಮತ್ತಷ್ಟು ಕರೋನಾ ಹರಡದಂತೆ ಎಚ್ಚರಿಕೆ ವಹಿಸಬೇಕು. ಅದರಿಂದ ಕರೋನಾ ಬಂದರೆ ಅದಕ್ಕಿಂತ ದೊಡ್ಡ ಪಾಪಾದ ಕೆಲಸ ಮತ್ತೊಂದಿಲ್ಲ. ಕೋವಿಡ್ ನಿಯಮಗಳು ರಾಜಕಾರಣಿ, ಜನಸಾಮಾನ್ಯರು ಎಲ್ಲರಿಗು ಒಂದೇ. ನಮ್ಮ ಯಾತ್ರೆಯಿಂದ‌ ಜನರಿಗೆ ತೊಂದರೆ ಆಗಬಾರದು. ನಾವು ನಮ್ಮ ವಾರ್ಡ್‌ನಲ್ಲಿ ಯಾತ್ರೆ ಮಾಡಿದ್ದೇವೆ. ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು ಯಾತ್ರೆ ಮಾಡಿದ್ದೇವೆ. ಜನರ ಬಳಿ ಹೋಗುವುದು ಸರಿ ಆದರೆ, ಹೋಗುವ ಹೆಸರಿನಲ್ಲಿ ನಿಯಮಗಳ ಉಲ್ಲಂಘನೆ ತಪ್ಪು ಎಂದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಜಿಲ್ಲಾ ಉಸ್ತುವಾರಿ ಸಚಿವರು ಅದನ್ನ ನೋಡಿಕೊಳ್ತಿದ್ದಾರೆ. ಅವರ ಯಾರ ಜೊತೆ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಜೊತೆ ಏನು ಚರ್ಚೆ ಮಾಡಿಲ್ಲ. ಅವರು ಮತ್ತು ಪಕ್ಷದವರು ಯಾರನ್ನ ಅಭ್ಯರ್ಥಿ ಮಾಡ್ತಾರೋ. ಅವರಿಗೆ ನಾನು ಸೇರಿ ನಮ್ಮ ಸದಸ್ಯರು ಮತ ಹಾಕುತ್ತೇವೆ. ನಮ್ಮ ಕ್ಷೇತ್ರದಲ್ಲೇ 12 ಜನ ನಾನು ಸೇರಿ 13 ಮತಗಳಿವೆ. ಪಕ್ಷ ಸೂಚಿಸಿದವರಿಗೆ ನಮ್ಮ ಮತ ಇರುತ್ತದೆ. ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಹೇಳಿದರು.

ಅವರಿಗೆ ಹೇಳುವಷ್ಟು ದೊಡ್ಡವನು ನಾನಲ್ಲ.

ಸ್ವಪಕ್ಷದ ವಿರುದ್ಧವೇ ಎಂಎಲ್ ಸಿ ಹೆಚ್.ವಿಶ್ವನಾಥ್ ಟೀಕೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಎ ರಾಮದಾಸ್, ಅವರಿಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಪಕ್ಷದ ಅಧ್ಯಕ್ಷರು ಅದನ್ನ ಗಮನಿಸುತ್ತಾರೆ. ಅವರು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಅವರ ಆತ್ಮಸಾಕ್ಷಿಗೆ ಗೊತ್ತು. ಈ‌ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ENGLISH SUMMARY…

MLA Ramdas responds to BJP MLC H. Vishwanath’s comments on own party over the Mysore-Bangalore 10-lane highway
Mysuru, August 23, 2021 (www.justkannada.in): MP Pratap Simha and BJP MLC H. Vishwanath had locked their horns over the Mysore-Bangalore 10-lane highway work credit. Mysuru BJP MLA S.A. Ramdas, who has responded over this has stated that the credit doesn’t go to any party, and the credit goes to Bharat Mata.
Speaking in Mysuru today, he explained that the 10-lane highway construction is undertaken with public money. “Nobody should claim it as their contribution. It is a development work of all. I have also made efforts for road construction in my constituency. But I don’t claim it as my credit. The credit goes to all the departments and the setup. It is the same with the National highway works,” he added.
On the occasion, he also expressed his displeasure over organizing the BJP Janashirvada rally and warned of following all the COVID precautionary measures without fail. “COVID rules apply to all irrespective of politicians and public. It should not trouble the people. We have also participated in rallies in our constituency, however, we followed all the precautionary measures,” he said.
Keywords: BJP/ MLA/ Ramdas/ H.Vishwanath/ statement/ 10-lane highway

Key words: mysore-MLA-SA Ramadas- credit war- Dashapath project,