ಮೈಮುಲ್ ವಿವಿಧ ಹುದ್ಧೆಗಳ ನೇಮಕಾತಿ ಅಕ್ರಮ ಆರೋಪ: ಆಯ್ಕೆ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ- ಸಾ.ರಾ ಮಹೇಶ್…

kannada t-shirts

ಮೈಸೂರು,ಆ,17,2020(www.justkannada.in): ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯನ್ನು ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿವಿಧ ಹುದ್ದೆಗಳ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ, ಆಗಸ್ಟ್ 13 ರಂದು ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಜಾರಿಗೊಳಿಸಿದೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದೆಂದು ಆದೇಶ ನೀಡಲಾಗಿದೆ. ಆದರೆ ಆಗಸ್ಟ್15 ಮತ್ತು 16 ರಂದು ನ್ಯಾಯಾಲಯಕ್ಕೆ ರಜಾ ದಿನವಾದ್ದರಿಂದ ಆದೇಶದ ಪ್ರತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸದರಿ ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು ಎಂದು ಹೇಳಿದರು.

ಬೆಂಗಳೂರಿನ ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ ಮಹೇಶ್,  ಶಾಸಕರು, ಮಂತ್ರಿಗಳು, ಎಲ್ಲರ ಜೀವನ ಕಾಯುವ ಕೆಲಸ ಸರ್ಕಾರದ್ದು. ಕೊರೋನ ಬಂದ ಮೇಲೆ ಗೃಹ ಇಲಾಖೆ ಮಲಗಿದೆ ಅನ್ನಿಸುತ್ತಿದೆ. ಇದೊಂದು ಆಶ್ಚರ್ಯಕರ ಘಟನೆ, ಆಗಬಾರದಿತ್ತು ಆಗಿದೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ..? ಮನೆಗೆ ಹಾಗೂ ಠಾಣೆಗೆ ನುಗ್ಗಿ ಹಲ್ಲೆ ಮಾಡುತ್ತಾರೆಂದರೆ ಇಂಟೆಲಿಜೆನ್ ಫೇಲ್. ಇದು ರಾಜ್ಯದ ಜನರೇ ತಲೆ ತಗ್ಗಿಸುವ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.mysore-mla-sa-ra-mahesh-maimul-accused-recruitment-highcourt

ಭಿಕ್ಷುಕನ ಬಗ್ಗೆ ಮಾತನಾಡುವುದಿಲ್ಲ: ಹಳ್ಳಿಹಕ್ಕಿಗೆ ಟಾಂಗ್…

ಶಾಸಕ ಹೆಚ್ ಪಿ ಮಂಜುನಾಥ್‌ ಮೇಲೆ ಹಲ್ಲೆಗೆ ಸಂಚು  ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ನಾನು ಭಿಕ್ಷುಕನ ವಿಚಾರ ಮಾತನಾಡುವುದಿಲ್ಲ. ಹೆಚ್. ವಿಶ್ವನಾಥ್ ನನ್ನನ್ನು ಕೊಚ್ಚೆ ಎಂದಿದ್ದಾರೆ. ನಾನು ಅವರನ್ನು ಭಿಕ್ಷುಕ ಎಂದಿದ್ದೇನೆ. ಕೊಚ್ಚೆ ಭಿಕ್ಷುಕನ ಬಗ್ಗೆ ಮಾತನಾಡುವುದಿಲ್ಲ. ಹಿರಿಯರಾಗಿ ವಿಶ್ವನಾಥ್ ಮಗನಿಗೆ ಬುದ್ದಿ ಹೇಳಬೇಕಿತ್ತು. ಅದು ಬಿಟ್ಟು ಮಂತ್ರಿ ಆಗುತ್ತೇನೆ ಅಂತಾ ಈ ರೀತಿ ಮಾಡಿದ್ದಾರೆ ಅನ್ನೋದು ಸರಿಯಲ್ಲ. ಅವರು ಈ ರೀತಿ ಹೇಳಿದ್ದು ರಾಜ್ಯದ ದುರ್ದೈವ ಎಂದು ಕಿಡಿಕಾರಿದರು.

Key words: mysore-MLA- sa.ra Mahesh – Maimul – accused – recruitment- highcourt

website developers in mysore