ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಗಳ ಆಯ್ಕೆ ವಿಚಾರ: ಹೊಸ ಬಾಂಬ್ ಸಿಡಿಸಿದ ಶಾಸಕ ಮುರುಗೇಶ್ ನಿರಾಣಿ…

ಮೈಸೂರು,ಜೂ,9,2020(www.justkannada.in): ಜೂನ್ 19 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನ ಅಚ್ಚರಿಯಾಗಿ ಹೈಕಮಾಂಡ್ ಆಯ್ಕೆ ಮಾಡಿದೆ.mysore-mla-murugesh-nirani-bjp-candidate-rajyasabha

ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಮುರುಗೇಶ್ ನಿರಾಣಿ, ಅವರು ಅಚ್ಚರಿಯ ಅಭ್ಯರ್ಥಿಗಳಲ್ಲ.ಅವರ ಹೆಸರು ರಾಜ್ಯ ಬಿಜೆಪಿ ಕಳುಹಿಸಿದ ಲಿಸ್ಟ್‌ನಲ್ಲಿ ಇತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈರಣ್ಣ ಕಡಾಡಿ, ಅಶೋಕ್ ಗಸ್ತಿ ಬಿಜೆಪಿಯ ಕಟ್ಟಾಳುಗಳು. ಎಲೆ ಮರೆ ಕಾಯಿಯಂತಿದ್ದು ಪಕ್ಷ ಕಟ್ಟಿದ್ದಾರೆ. ಮಾಧ್ಯಮಗಳಲ್ಲಿ ಕೆಲವರ ಹೆಸರು ಮಾತ್ರ ಬರುತ್ತಿತ್ತು. ಆದ್ರೆ ಹೈಕಮಾಂಡ್‌ ಗೆ ಕಳುಹಿಸಿದ ಲಿಸ್ಟ್‌ನಲ್ಲಿ ಈ ಇಬ್ಬರ ಹೆಸರು ಇತ್ತು. ಇದರಲ್ಲಿ ಅಚ್ಚರಿ ಏನೂ ಇಲ್ಲ. ಇದರಿಂದ ಯಾರಿಗೂ ಅಸಮಾಧಾನವು ಇಲ್ಲ. ನಾನು ಮಂತ್ರಿ ಆಕಾಂಕ್ಷಿಯಾಗಿದ್ದೆ. ಆದರೇ ಸಿಗಲಿಲ್ಲ ಅಂತ ಅಸಮಾಧಾನ ತೋರಲಿಲ್ಲ. ನಮ್ಮ ಪಕ್ಷದಲ್ಲಿ ದುಡಿದವರಿಗೆ ಸ್ಥಾನಮಾನ ಸಿಕ್ಕೆ ಸಿಗುತ್ತೆ. ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನ ಸಿಗಲಿದೆ. ಪರಿಷತ್ ಚುನಾವಣೆ ಆಯ್ಕೆ ಸಮಿತಿಯಲ್ಲಿ ಮುರುಗೇಶ್ ನಿರಾಣಿ ಇಲ್ಲ. ಹಾಗಾಗಿ ಪರಿಷತ್ ಚುನಾವಣೆ ವಿಚಾರವನ್ನ ಸೂಕ್ತ ವ್ಯಕ್ತಿಗಳ ಬಳಿ ಕೇಳಿ ಎಂದು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ತಿಳಿಸಿದರು.

ಪಾಂಡವಪುರ ಕಾರ್ಖಾನೆ ಖಾಸಗೀಕರಣಕ್ಕೆ ಮಂಡ್ಯ ಜನಪ್ರತಿನಿಧಿಗಳ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಮುರುಗೇಶ್ ನಿರಾಣಿ, ಯಾರು ಸಹ ವಿರೋಧ ಮಾಡಿಲ್ಲ. ಅಲ್ಲಿನ ಎಲ್ಲ ಜನಪ್ರತಿನಿಧಿಗಳು ನಮಗೆ ಸಹಕಾರ ನೀಡಿದ್ದಾರೆ. ಮೈ ಶುಗರ್ಸ್ ಕಾರ್ಖಾನೆ ಬಗ್ಗೆ ನಾನು ಏನೂ ತೀರ್ಮಾನ ಕೈಗೊಂಡಿಲ್ಲ. ಪಾಂಡವಪುರ ಕಾರ್ಖಾನೆಗೆ 26 ಕೋಟಿ ಹಣ ಕಟ್ಟಬೇಕಿದೆ. ಅದನ್ನ ನಾವು ಕಟ್ಟುತ್ತೇವೆ, ಆದ್ರೆ ಅಲ್ಲಿನ ಬಾಕಿ ನಮಗೆ ಸಂಬಂಧ ಪಡೋಲ್ಲ. ಈ ವರ್ಷದಿಂದ ನಾವು ಅಲ್ಲಿನ ಎಲ್ಲಾ ವ್ಯವಸ್ಥೆ ಬಳಸಿಕೊಂಡು ಕಬ್ಬು ಅರೆಯುತ್ತೇವೆ. ಅದರಲ್ಲಿನ ಬಯೋ ಉತ್ಪನ್ನಗಳನ್ನ ತಯಾರಿಸಿ ರೈತರಿಗೆ ಹಿಂದಿಗಿಂತ ಹೆಚ್ಚಿನ ಆದಾಯ ಬರುವಂತೆ ಮಾಡುತ್ತೇವೆ. ಆ ಭಾಗದಲ್ಲಿ ಇದರಿಂದ ನಿರುದ್ಯೋಗ ನಿವಾರಣೆ ಆಗುತ್ತೆ. ಆದ್ರೆ ಮೈ ಶುಗರ್ಸ್ ಬಗ್ಗೆ ನಾನೇನು ತೀರ್ಮಾನ ಮಾಡಿಲ್ಲ. ವಿರೋಧ ಮಾಡುವವರು ಯಾವ ಕಾರಣಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.

Key words: Mysore- MLA- Murugesh nirani-BJP- candidate- rajyasabha