ಕಂದಾಯ ವಸೂಲಿ ಮಾಡಿ, ಬರುವ ಹಣವನ್ನು ಮರೆಮಾಚಬೇಡಿ- ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಸಚಿವ ವಿ.ಸೋಮಣ್ಣ…

ಮೈಸೂರು,ನ,2,2019(www.justkannada.in): ಇಂದಿನಿಂದ ಸರಿಯಾಗಿ  ರೆವಿನ್ಯೂ ಕಲೆಕ್ಟ್ ಮಾಡಿ. ಕಂದಾಯ ವಸೂಲಿ ಮಾಡಿ ಬರುವ ಹಣವನ್ನು ಮರೆಮಾಚಬೇಡಿ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ‌ ಪಾಲಿಕೆ ಅಧಿಕಾರಿಗಳು ಹಾಗೂ ಮೂಡ ಅಧಿಕಾರಿಗಳೊಂದಿಗೆ ಸಚಿವ ವಿ.ಸೋಮಣ್ಣ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ .ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವ ಸೋಮಣ್ಣ,  ಮನಸು ಮಾಡಿದ್ರೆ ಪಾಲಿಕೆ ರೆವಿನ್ಯೂ ದ್ವಿಗುಣ ಮಾಡಬಹುದು. ಹೊಸ ಕಟ್ಟಡಗಳು, ನಿವೇಶನಗಳ ಕಂದಾಯ ವಸೂಲಿ ಮಾಡಿ. ಕೈ ವೊಡ್ಡುವುದನ್ನು ಬಿಡ್ರಯ್ಯ. ರೆವಿನ್ಯೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡ್ರಯ್ಯ.. ತಪ್ಪು ಮಾಡಿ ನನ್ ಕಣ್ಣಿಗೆ ಬೀಳಬೇಡ್ರಯ್ಯ. ಕಂದಾಯ ವಸೂಲಿ ಮಾಡಿ ಬರುವ ಹಣವನ್ನು ಮರೆಮಾಚಬೇಡಿ. ಒಂದು ತಿಂಗಳಲ್ಲಿ‌ ಎಚ್ಚೆತ್ತುಕೊಳ್ಳಿ  ಎಂದು ಅಧಿಕಾರಿಗಳಿಗೆ ಸಚಿವ ಸೋಮಣ್ಣ ಎಚ್ಚರಿಕೆ ನೀಡಿದರು.

ರಿಂಗ್ ರಸ್ತೆ ಸುತ್ತಮುತ್ತಲ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ವಿಚಾರ ಸಂಬಂಧ, ನನ್ನ ಅವಧಿಯಲ್ಲಿ ಆ ಎಲ್ಲಾ ಬಡಾವಣೆಗಳನ್ನು ಪಾಲಿಕೆ ಹಸ್ತಾಂತರ ಮಾಡುತ್ತೇನೆ. ಒಂದು ತಿಂಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಎಂದು ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮುಡಾ ನಿವೇಶನ ಮತ್ತು ಮನೆಗಳ ಖಾತೆ ವಿಚಾರ‌ ಸಂಬಂಧ ಖಾತೆ ವಿಳಂಬವಾಗದಂತೆ ನೋಡಿಕೊಳ್ಳಿ. ಇವೆಲ್ಲವೂ ಪುಸ್ತಕದಲ್ಲಿ‌ ಅಡ್ಜೆಸ್ಟ್ ಮಾಡಿಕೊಳ್ಳುವ ಕೆಲಸ ರೀ.ನಾವೂ ನೀವು ಸೇರಿ ಸರಿಮಾಡೋಣ ಎಂದು ತಿಳಿಸಿದರು.

Key words: mysore-Minister -V. Somanna -warned –officer-meeting.