ದಸರಾ ಉದ್ಘಾಟನೆ, ಜಂಬೂ ಸವಾರಿಗೆ ಪುಷ್ಪಾರ್ಚನೆ ಸೇರಿ ವಿವಿಧ ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಮೈಸೂರು,ಆ,24,2019(www.justkannada.in): ಸೆಪ್ಟೆಂಬರ್ 29ರಂದು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಂದು ಚಾಮುಂಡಿಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮೈಸೂರಿನ ಡಿಸಿ ಕಚೇರಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ  ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಬಳಿಕ ಡಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಚಿವ ವಿ.ಸೋಮಣ್ಣ  ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.  ಸೆಪ್ಟೆಂಬರ್ 29ರಂದು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಂದು ಚಾಮುಂಡಿಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್‌ 29  ರಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ 9:30 ರಿಂದ 10:20 ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ  ಸಿಎಂರಿಂದ  ಪೂಜೆ ನೆರವೇರುತ್ತದೆ. ನಂತ್ರ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಹಾಗೆಯೇ ಅಕ್ಟೊಬರ್‌ 8 ರಂದು  2:15 ರಿಂದ 2:58 ರೊಳಗೆ ಸಲ್ಲುವ ಶುಭಲಗ್ನದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಂಜೆ 4:30 ರಿಂದ 4:58 ರಲ್ಲಿ ಸಲ್ಲುವ ಮಕರ ಶುಭಲಗ್ನದಲ್ಲಿ  ದಸರಾ ಉದ್ಘಾಟಕರಾದ ಎಸ್ ಎಲ್ ಬೈರಪ್ಪ ಹಾಗೂ ಮುಖ್ಯಮಂತ್ರಿಗಳಿಂದ ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ  ತಿಳಿಸಿದರು.

ಈ ಬಾರಿಯ ದಸರಾದಲ್ಲಿ ವಿಭಿನ್ನ ಕಾರ್ಯಕ್ರಮ ಅಳವಡಿಕೆ..

ಈ ಬಾರಿಯ ದಸರಾದಲ್ಲಿ ವಿಭಿನ್ನ ಕಾರ್ಯಕ್ರಮ ಅಳವಡಿಕೆ ಮಾಡಲಾಗುತ್ತದೆ. ಸೋಮವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ನಡೆಸುತ್ತೇನೆ. ಸ್ಥಳಿಯ ಶಾಸಕರು, ಪಾಲಿಕೆ , ಜಿಪಂ ಸದಸ್ಯರ ಸಭೆ  ನಡೆಸಿ ಚರ್ಚಿಸುತ್ತೇನೆ ಎಂದರು.

ದಸರಾ ಪಾಸ್ ಗೊಂದಲಕ್ಕೆ ತೆರೆ ಬಿದ್ದಿದೆ ಇನ್ನು ಹತ್ತು ದಿನಗಳಲ್ಲಿ ದಸರಾ ಪಾಸ್ ರೆಡಿಯಾಗಲಿದೆ. ದಸರಾ ಸಂಬಂದ ಗೊಂದಲ ನಿವಾರಣೆಗೆ ಒಂದು ಕಾಲ್ ಸೆಂಟರ್ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದ ವಿ.ಸೋಮಣ್ಣ, ಎಲ್ಲಾ ಸ್ಥಳಿಯ ಜನಪ್ರತಿನಿಧಿಗಳನ್ನ ನಾನೇ ಫಲ ತಾಂಬೂಲ ಕೊಟ್ಟು ಆಹ್ವಾನ ಮಾಡ್ತಿನಿ. ಎಲ್ಲಾ ಜನಪ್ರತಿನಿಧಿಗಳನ್ನ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡ್ತಿನಿ.ಅರಮನೆಗೆ ತೆರಳಿ ರಾಜಮನೆತನಕ್ಕೆ ಆಹ್ವಾನ ನೀಡ್ತಿವಿ. ಪ್ರತಿ ಕಾರ್ಯಕ್ರಮಗಳಲ್ಲಿಯೂ ರಾಜಮನೆತನ ಭಾಗಿಯಾಗಲು ಕೋರುತ್ತೇನೆ ಎಂದರು.

ಗಜಪಡೆ ಸೋಮವಾರ ಅರಮನೆ ಪ್ರವಾಸ…

ಗಜಪಡೆ ಸೋಮವಾರ ಅರಮನೆ ಪ್ರವೇಶ ಮಾಡಲಿದೆ. ಹೀಗಾಗಿ ಆನೆಗಳ ಜತೆ ಬಂದಿರುವ ಮಾವುತರು, ಕವಾಡಿಗಳಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಒಂದು ದಿನ ಮೈಸೂರು ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸುತ್ತೇವೆ ಎಂದು ತಿಳಿಸಿದರು.

ದಸರಾ ಉದ್ಘಾಟಕರಾದ ಎಸ್ ಎಲ್ ಬೈರಪ್ಪ ಅವರ ಸಲಹೆ ಕೂಡ ಪಡೆಯುತ್ತೇವೆ. ಮೈಸೂರಿನ ಎಲ್ಲಾ ಮಠ ,ಮಂದಿರ ಚರ್ಚ್ ಗಳ ಸ್ವಾಮೀಜಿ,  ಪಾದರ್ ಮೌಲ್ವಿಗಳ ಭೇಟಿ ಮಾಡಿ ಆಹ್ವಾನ ನೀಡಲಾಗುತ್ತದೆ ಎಂದು ವಿ.ಸೋಮಣ್ಣ ಹೇಳೀದರು.

ಸಭೆಗೆ ಕಾಂಗ್ರೆಸ್ ಶಾಸಕರ ಗೈರು ಹಾಜರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ,  ನಾನು ಎಲ್ಲರ ಮನೆಗೆ ತೆರಳಿ  ಆಹ್ವಾನ ಮಾಡುತ್ತೇನೆ. ಜಿಲ್ಲಾ ಉಸ್ತುವಾರಿ  ಸಚಿವನಾಗಿ  ನಾನೇ  ಎಲ್ಲರ ಮನೆಗೆ ತೆರಳಿ ಆಹ್ವಾನ ಮಾಡುತ್ತೇನೆ. ರಾಮದಾಸ್  ಅವರನ್ನು ಸಹ ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ. ಅವರ  ಜೊತೆಯು ಮಾತನಾಡಿ  ಅವರ ಅನುಭವ,ಸಹಕಾರ ಕೇಳುತ್ತೇವೆ. ಎಂದು ವಿ.ಸೋಮಣ್ಣ ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ..

ದಸರಾ ಮುಗಿದು 15 ದಿನಗಳ ವರೆಗೂ ಜಗಮಗಿಸಲಿದೆ. ವರ್ಷ ಪೂರ್ತಿ ದಸರಾ  ವೆಬ್ ಸೈಟ್ ಕಾರ್ಯ ನಿರ್ವಹಿಸಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ ನೀಡಲಾಗುತ್ತದೆ. 24*7 ಕಾಲ್ ಸೆಂಟರ್ ತೆರೆದು ದಸರಾ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅರಮನೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವ ಸೆಂಟರ್ ಇರಲಿದೆ. ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗು ದೇಶದಲ್ಲು ದಸರೆ ಪ್ರಚಾರ ಮಾಡಲಾಗುತ್ತದೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡುತ್ತೇವೆ ಎಂದು ವಿ.ಸೋಮಣ್ಣ ನುಡಿದರು.

Key words: Mysore –minister-V. Somanna-various- programs -inauguration –Dasara-jamboosavari