ಪಾದಯಾತ್ರೆಯಿಂದಲೇ ಕಾಂಗ್ರೆಸ್ ನಾಶ: ಬೊಮ್ಮಾಯಿ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಹಿ ಸುದ್ದಿ – ಸಚಿವ ಆರ್.ಅಶೋಕ್.

ಮೈಸೂರು,ಮಾರ್ಚ್,3,2022(www.justkannada.in):  ನಾಳೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಬೊಮ್ಮಾಯಿ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಹಿ ಸುದ್ದಿ ಸಿಗಲಿದೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನರಸೀಪುರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಬೂತ್ ಅಧ್ಯಕ್ಷರ ಸಮಾವೇಶದಲ್ಲಿ ಭಾಗಿದ್ದರು. ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯದ ರೈತರು, ಬಡವರು, ಮಧ್ಯಮ ವರ್ಗದ ಪರವಾದ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ನಲ್ಲಿ ಮಂಡನೆಯಾದ ಯೋಜನೆಗಳನ್ನ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಬೊಮ್ಮಾಯಿ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಹಿ ಸುದ್ದಿ ಸಿಗಲಿದೆ. ಈ ಬಾರಿಯ ಬಜೆಟ್ ನಲ್ಲಿ ಪ್ರತಿಯೊಂದು ಮನೆಗೂ ಒಳ್ಳೆಯ ಖುಷಿಯ ವಿಚಾರ ಸಿಗಲಿದೆ. ಜನರ ನಿರೀಕ್ಷೆಗಿಂತ ಹೆಚ್ಚಾಗಿ ಬೊಮ್ಮಾಯಿ ಅವರು ಕೊಡುಗೆ ಕೊಡಲಿದ್ದಾರೆ ಎಂದರು.

ಉಕ್ರೆನ್ ಮತ್ತು ರಷ್ಯಾ ನಡುವಿವ ವಾರ್ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಉಕ್ರೆನ್ ದೇಶದಲ್ಲಿರುವ ವಿವಿಧ ರಾಷ್ಟ್ರಗಳ ಜನರನ್ನ ಕರೆ ತರುವಲ್ಲಿ ಇತರೆ ದೇಶಗಳು ಹಿಂದೆ ಸರಿದಿದೆ. ಭಾರತ ದೇಶ ಹಾಗೂ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕು ಸಚಿವರನ್ನ ಉಕ್ರೆನ್ ದೇಶಕ್ಕೆ ಕಳುಹಿಸಿದ್ದಾರೆ. ಉಕ್ರೆನ್ ನಲ್ಲಿರುವ ಭಾರತೀಯರಿಗೆ ಮನಸ್ಥೈರ್ಯ ತುಂಬಿ, ರಕ್ಷಣೆ ಮಾಡಿದ 17ಸಾವಿರ ಭಾರತೀಯರನ್ನ ಭಾರತಕ್ಕೆ ಕರೆ ತರುವ ಉದ್ದೇಶವಾಗಿದೆ ಎಂದರು.

ಆಪರೇಷನ್ ಗಂಗಾ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್, ಕೈಲಾಗದವರು ಮೈ ಪರಚಿಕೊಂಡಂತಾಗಿದೆ ಕಾಂಗ್ರೆಸ್ ಸ್ಥಿತಿ. ಮುಂದುವರಿದ ಎಷ್ಟೋ ದೇಶಗಳು ಕೂಡ ತಮ್ಮ ಪ್ರಜೆಗಳು ಏನಾದ್ರೂ ಮಾಡಿಕೊಳ್ಳಿ ಎಂದಿದ್ದಾರೆ. ಅಂತಹದ್ದರಲ್ಲಿ ನಮ್ಮ ಪ್ರಧಾನಿ ಮೋದಿ ಕೊನೆಯ ಪ್ರಜೆಯನ್ನೂ ಕೂಡ ಕರೆತರುವುದಾಗಿ ತಿಳಿಸಿದ್ದಾರೆ. ಇವತ್ತು ಪಾಕಿಸ್ತಾನದವರೂ ಕೂಡ ಭಾರತದ ಬಾವುಟ ಹಿಡಿದು ಉಕ್ರೋನ್ ನಿಂದ ಸೇಫಾಗಿ ಬರುತ್ತಿದ್ದಾರೆ. ಇದು ನಮ್ಮ ಭಾರತಕ್ಕೆ ಇರುವ ತಾಕತ್ತು. ಇವತ್ತು ಪ್ರಪಂಚದಲ್ಲಿ ಭಾರತದ ಬಗ್ಗೆ ಗೌರವ ಹಾಗೂ ಭಯ ಎರಡೂ ಇದೆ. ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿದೆ.

ಪಾದಯಾತ್ರೆ ಮಾಡಿ ಕಾಂಗ್ರೆಸ್ ನಾಶ ಆಗಲಿದೆ..

ಉಕ್ರೇನ್ ನಲ್ಲಿ ನಮ್ಮ ವಿದ್ಯಾರ್ಥಿಗಳು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಇಲ್ಲಿ ಜನ ಹಿಂದೂ ಕಾರ್ಯಕರ್ತ ಹರ್ಷ ಸತ್ತ ಸಂಕಷ್ಟದಲ್ಲಿ ಇದ್ದಾರೆ. ಈ ವೇಳೆ ಕಾಂಗ್ರೆಸ್ ‌ನವರಿಗೆ ಪಾದಯಾತ್ರೆ ಬೇಕಿತ್ತಾ. ದಾರಿಯುದ್ದಕ್ಕೂ ಹೊಬ್ಬಟ್ಟು, ಹೋಳಿಗೆ ತಿಂದು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಯಿಂದ ಜನ ಸಾಮಾನ್ಯರಿಂದ ಜಡ್ಜ್‌ ವರೆಗೆ ತೊಂದರೆ ಆಗಿದೆ. ನಾವೂ ಕೂಡ ಅವರ ಮೇಲೆ ಕೇಸ್ ಹಾಕಿದ್ದೇವೆ. ಆದರೆ ಕಾಂಗ್ರೆಸ್ ಅದಕ್ಕೆ ಕೇರ್ ಮಾಡುತ್ತಿಲ್ಲ. ಕಾಂಗ್ರೆಸ್‌ಗೆ ಈ ನೆಲದ ಕಾನೂನು ಬೇಕಾಗಿಲ್ಲ. ಅವರಿಗೆ ಬರಿ ಚುನಾವಣೆ ಗೆಲ್ಲೋದು ಮಾತ್ರ ಬೇಕು. ಈ ರೀತಿ ಜನರಿಗೆ ತೊಂದರೆ ಕೊಟ್ಟವರನ್ನು ಯಾರು ಗೆಲ್ಲಿಸುತ್ತಾರೆ. ಬೆಂಗಳೂರು ಜನ ಹಿಡಿ ಶಾಪ ಹಾಗುತ್ತಿದ್ದಾರೆ. ಪಾದಯಾತ್ರೆ ಮಾಡಿ ಕಾಂಗ್ರೆಸ್ ನಾಶ ಆಗಲಿದೆ ಎಂದು ಭವಿಷ್ಯ ನುಡಿದರು.

Key words: mysore-minister-R.Ashok