ಹಂತ ಹಂತವಾಗಿ ರೇಷ್ಮೆ ವ್ಯಾಪಾರ ಚೇತರಿಕೆ: ಬಾಳೆ ಬೆಳೆಗಾರರಿಗೂ ಪರಿಹಾರ- ಸಚಿವ ನಾರಾಯಣಗೌಡ…

ಮೈಸೂರು,ಜೂ,15,2020(www.justkannada.in): ಅಧಿಕಾರಿಗಳ ಜತೆ ಸಭೆ ನಡೆಸಿ ತೋಟಗಾರಿಕೆ ಹಾಗೂ ರೇಷ್ಮೆ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಲಾಗಿದೆ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ತಿಳಿಸಿದರು.

ಮೈಸೂರಿನಲ್ಲಿ ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ನಾರಾಯಣಗೌಡ, ಕೊರೊನಾ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸಾದ್ಯವಾಗಿರಲ್ಲ. ಇಂದು ಅಧಿಕಾರಗಳ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ತೋಟಗಾರಿಕೆ ಹಾಗು ರೇಷ್ಮೆ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಲಾಗಿದೆ.ಮೈಸೂರಿ ಜಿಲ್ಲೆಯಲ್ಲಿ 7.87 ಕೋಟಿ ರೂ ಪರಿಹಾರ ನೀಡುತ್ತಿದ್ದೇವೆ.ಶಾಸಕ ಜಿಟಿ ದೇವೇಗೌಡ ಬಾಳೆ ಬೆಳಯುವ ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂದು ತಿಳಿಸಿದ್ದರು. ಈಗ ಬಾಳೆ ಬೆಳೆಗಾರರಿಗೂ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.mysore-  Minister- Narayana Gowda-meeting

ಲಾಕ್ ಡೌನ್ ನಿಂದ ರೇಷ್ಮೆ ಬಟ್ಟೆ ಖರೀದಿ ಕುಂಠಿತವಾಗಿದೆ‌. ಹೀಗಾಗಿ ಹಂತ ಹಂತವಾಗಿ ವ್ಯಾಪಾರ ಚೇತರಿಕೆ ಕಾಣಲಿದೆ. ರೇಷ್ಮೆ ಬೆಳೆಗಾರರ ಹಿತವಕಾಯುವಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

Key words: mysore-  Minister- Narayana Gowda-meeting