ಹೆಚ್ಚುವರಿಯಾಗಿ ಡ್ರಾ ಆದ ಹಣವನ್ನ  ಬ್ಯಾಂಕ್ ಗೆ ವಾಪಸ್ ನೀಡಿ  ಪ್ರಾಮಾಣಿಕತೆ ಮೆರೆದ ಮೆಕಾನಿಕ್…

Promotion

ಮೈಸೂರು,ಜ,24,2020(www.justkannada.in):  ಈಗಿನ ಕಾಲದಲ್ಲಿ ಹಣಕ್ಕಾಗಿ ಮೋಸ ಮಾಡುವ ಮಂದಿಯೇ ಹೆಚ್ಚು. ಆದರೆ ಮೈಸೂರಿನಲ್ಲಿ ಮ್ಯಾಕಾನಿಕ್ ಒಬ್ಬರು  ಎಟಿಎಂನಲ್ಲಿ ಹೆಚ್ಚುವರಿಯಾಗಿ ಡ್ರಾ ಆದ ಹಣವನ್ನ ಬ್ಯಾಂಕ್ ಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆಯುವ ಮೂಲಕ ಮಾದರಿಯಾಗಿದ್ದಾರೆ.

ಹೌದು, ನಗರದ ವಿದ್ಯಾರಣ್ಯಪುರಂ ನಿವಾಸಿ ಮಧುಸೂದನ್ ಎಂಬುವವರೇ ಪ್ರಾಮಾಣಿಕತೆ ಮೆರೆದ ಮೆಕಾನಿಕ್. ನಿನ್ನೆ ಸಂಜೆ ಚಾಮುಂಡಿಪುರಂನಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಈ ಮಧ್ಯೆ  ಮಧುಸೂದನ್ ಅವರು ಎಟಿಎಂನಲ್ಲಿ 1600 ರೂ ನಗದು ಡ್ರಾ ಮಾಡಿದ್ದಾರೆ. ಈ ವೇಳೆ 1600 ರೂ ಬದಲು 4 ಸಾವಿರ. ರೂ ವಿತ್ ಡ್ರಾ ಆಗಿತ್ತು.

ಹೆಚ್ಚುವರಿಯಾಗಿ ಬಂದ ಹಣವನ್ನ ಮೆಕಾನಿಕ್ ಮಧುಸೂದನ್ ಬ್ಯಾಂಕಿಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದು ಮಾದರಿಯಾಗಿದ್ದಾರೆ. ಹಣ ಹಿಂದಿರುಗಿಸಿದ ಮಧುಸೂದನ್ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮಧುಸೂದನ್ ಅವರನ್ನ  ನಗರಪಾಲಿಕೆ ಸದಸ್ಯೆ ಶೋಭಾ ಸುನೀಲ್, ಬ್ಯಾಂಕ್ ಮ್ಯಾನಜರ್ ಅಮರನಾಥ್ ಸನ್ಮಾನಿಸಿ ಗೌರವಿಸಿದ್ದಾರೆ.

Key words: mysore- mechanic – honestly-returning –money- drawn-bank