ಎಂಸಿಸಿ : ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಮಹೇಶ್ ಗೆ ಜವಾಬ್ದಾರಿ ಪ್ರಶ್ನಿಸಿ ಎಸಿಬಿಗೆ ದೂರು

ಮೈಸೂರು, ಜೂ.27, 2019 : (www.justkannada.in news) : ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ್ ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ಎಸಿಬಿಗೆ ದೂರು ನೀಡಲಾಗಿದೆ.

ಮೈಸೂರಿನ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಬಾನುಮೋಹನ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಭ್ರಷ್ಟಚಾರ ನಿಗ್ರಹದಳದ ಆರಕ್ಷಕ ಅಧೀಕ್ಷಕರು ಸೇರಿದಂತೆ ಪ್ರಾದೇಶಿಕ ಆಯುಕ್ತರು, ಮೈಸೂರು ಜಿಲ್ಲಾಧಿಕಾರಿಗಳು, ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ಈ ದೂರಿನ ಒಟ್ಟಾರೆ ಅಂಶ ಹೀಗಿದೆ….

ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ್ ಅವರು ಆ ಹುದ್ದೆಗೆ ಅರ್ಹರಲ್ಲ. ಕಾರಣ ಅವರು ಎಸ್.ಎಸ್.ಎಲ್.ಸಿ ಯಲ್ಲಿ ಕೇವಲ 213 ಅಂಕಗಳನ್ನು ಪಡೆದಿದ್ದಾರೆ. ಈ ವ್ಯಕ್ತಿ ಮೊದಲು ಎಂಸಿಸಿ ಚಿತಗಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬಳಿಕ, ಬಡ್ತಿ ಹೊಂದಿ ಸಹಾಯಕ ಆಯುಕ್ತರಾಗಿ ಕೆಲವು ವಲಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಈ ಸಂಬಂಧವೂ ದೂರು ನೀಡಿದ್ದು ಅದು ವಿಚಾರಣೆ ಹಂತದಲ್ಲಿದೆ. ಇಂಥ ಸಂದರ್ಭದಲ್ಲಿ ಇವರನ್ನು ಮತ್ತೆ ಪ್ರಭಾರ ಅಧೀಕ್ಷಕ ಅಭಿಯಂತರರಾಗಿ ಜವಾಬ್ದಾರಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಸೂಕ್ತ ವಿಚಾರಣೆ ನಡೆಸಿ ಅನ್ಯಾಯ ಸರಿಪಡಿಸಿ ಎಂದು ದೂರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

——

key words : mysore-mcc-se-complaint-police-dc-banu.mohan