ಮೈಸೂರು ಮೇಯರ್ ಚುನಾವಣೆ: ಮೀಸಲಾತಿ ಪ್ರಕಟಕ್ಕೂ ಮುನ್ನವೇ ಲಾಬಿ ಶುರು

ಮೈಸೂರು, ಮಾರ್ಚ್ 06, 2022 (www.justkannada.in): ಮೈಸೂರು ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಲಾಬಿ ಶುರುವಾಗಿದೆ.

ಮೀಸಲಾತಿ ಪ್ರಕಟವಾಗುವ ಮುನ್ನವೇ ಮೇಯರ್ ಸ್ಥಾನಕ್ಕಾಗಿ ಸದಸ್ಯರು ಲಾಬಿ ಆರಂಭಿಸಿದ್ದಾರೆ. ಬಹುತೇಕ ಈ ಬಾರಿ ಜೆಡಿಎಸ್ ಗೆ ಮೇಯರ್ ಸ್ಥಾನ ಸಿಗುವ ಸಾಧ್ಯತೆ ಇದೆ.

ಮೀಸಲಾತಿ ಪ್ರಕಟ ಮುನ್ನವೇ ಪಕ್ಷದ ನಾಯಕರನ್ನು ಆಕಾಂಕ್ಷಿಗಳು ಭೇಟಿ ಮಾಡುತ್ತಿದ್ದಾರೆ. ಈ ಬಾರಿ “ಸಾಮಾನ್ಯ ಪುರುಷ” ಸ್ಥಾನಕ್ಕೆ ಮೀಸಲಾತಿ ಸಿಗುವ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ಇದ್ದಾರೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್’ನಿಂದ ಮೂವರು ಸದಸ್ಯರಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ವರಿಷ್ಠರ ಗಮನ ಸೆಳೆಯುಲು ಮೂವರು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ.

ಹಿರಿಯ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜ್, ಎಸ್ ಬಿ ಎಂ ಮಂಜು,ಕೆ ವಿ ಶ್ರೀಧರ್ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡಿದ್ದ ಕೆ.ವಿ.ಶ್ರೀಧರ್.

ಜೆಡಿಎಸ್ ನಲ್ಲಿ ಶಾಸಕ ಸಾರಾ ಮಹೇಶ್ ತೀರ್ಮಾನವೇ ಅಂತಿಮವಾಗಿದೆ. ಈ ಹಿನ್ನೆಲೆ ಸಾರಾ ಮಹೇಶ್ ಅವರ ಹಿಂದೆ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಆದರೆ ಮೀಸಲಾತಿ ಪ್ರಕಟವಾಗುವತ್ತ ಆಕಾಂಕ್ಷಿಗಳು ಚಿತ್ತ ಹರಿಸಿದ್ದಾರೆ.