ಮೈಸೂರು ಮೇಯರ್  ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿಕೆಗೂ ಮುಖಭಂಗ…?

ಮೈಸೂರು,ಫೆಬ್ರವರಿ,24,2021(www.justkannada.in):  ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೊನೆಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆದಿದ್ದು ಮೇಯರ್ ಸ್ಥಾನ ಜೆಡಿಎಸ್ ಪಾಲಾಗಿದೆ.jk

ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಆದರೆ ಒಪ್ಪಂದದ ಪ್ರಕಾರ ಕಾಂಗ್ರೆಸ್ ಗೆ ಸಿಗಬೇಕಿದ್ದ ಮೇಯರ್ ಪಟ್ಟ ಜೆಡಿಎಸ್ ಪಾಲಾಗಿದೆ. ಹೀಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಬೇಸರಗೊಂಡಿದ್ದಾರೆ.

ಈ ಮಧ್ಯೆ ಜೆಡಿಎಸ್ ಗೆ ಮೇಯರ್ ಪಟ್ಟ ಸಿಕ್ಕರೂ ಸಹ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮುಖಭಂಗ ಅನುಭವಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಹೌದು, ಕಾಂಗ್ರೆಸ್ ಜತೆ ಮೈತ್ರಿಗೆ ಹೆಚ್.ಡಿ ಕುಮಾರಸ್ವಾಮಿ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಿ ಇಂದು ಬೆಳಿಗ್ಗೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಕ್ಷದ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯಗೆ ತಮ್ಮ ಶಕ್ತಿ ತೋರಿಸುವುದಾಗಿ  ಹೆಚ್.ಡಿ ಕುಮಾರಸ್ವಾಮಿ ಶಪಥ ಮಾಡಿದ್ದರು.

mysore-mayor-election-former-cm-hd-kumaraswamy
ಕೃಪೆ- ineternet

ಅದಕ್ಕಾಗಿ ನೆನ್ನೆ ರಾತ್ರಿಯಿಂದ ಸಭೆಯ ಮೇಲೆ ಸಭೆ ನಡೆಸಿದ್ದರು. ಆದರೆ ಹೆಚ್.ಡಿ ಕುಮಾರಸ್ವಾಮಿ ನಡೆಸಿದ್ಧ ಎಲ್ಲಾ ಸಭೆಗಳು ವ್ಯರ್ಥವಾಗಿದೆ. ಮೈಸೂರು ಪಾಲಿಕೆಯಲ್ಲಿ ಕೊನೆ ಕ್ಷಣದಲ್ಲಿ ಹಳೆಯ ದೋಸ್ತಿ ಮುಂದುವರೆದಿದ್ದು, ಹೆಚ್.ಡಿ ಕುಮಾರಸ್ವಾಮಿ ಮಾತಿಗೆ ಜೆಡಿಎಸ್ ಪಾಲಿಕೆ ಸದಸ್ಯರು ವಿರುದ್ದವಾಗಿ ನಡೆದುಕೊಂಡರಾ..? ಎಂಬ ಪ್ರಶ್ನೆ ಎದ್ಧಿದೆ.

Key words: Mysore- mayor- election- Former CM- HD kumaraswamy