ಗಾಂಜಾ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಆರೋಪಿಗಳು: ಮಾದಕ ವಸ್ತು ಮತ್ತು ವಾಹನ ಪೊಲೀಸರ ವಶಕ್ಕೆ…

ಮೈಸೂರು,ಸೆಪ್ಟಂಬರ್,29,2020(www.justkannada.in): ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನ ಮೈಸೂರಿನ ಕೆ.ಆರ್ ಠಾಣಾ ಪೊಲೀಸರು ಬಂಧಿಸಿ ಗಾಂಜಾ ಸಾಗಿಸುತ್ತಿದ್ದ ವಾಹನವನ್ನ ವಶಕ್ಕೆ ಪಡೆದಿದ್ದಾರೆ.jk-logo-justkannada-logo

ಮಹಮ್ಮದ್ ಶಫಿ, ಮಹಮ್ಮದ್ ಅಲಿ, ಮಜೀದ್, ಇಬ್ರಾಹಿಂ ಕುಟ್ಟಿ ಬಂಧಿತ ಆರೋಪಿಗಳು. ಆರೋಪಿಗಳ ಬಳಿ ಇದ್ದ 85 ಕೆಜಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಬೊಲೆರೊ ವಾಹನದಲ್ಲಿ ಆಂಧ್ರಪ್ರದೇಶದಿಂದ ಕೇರಳಕ್ಕೆ ಮೈಸೂರಿನ ಮೂಲಕ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.mysore-marijuana-accused-arrest-police-seized

ಮೈಸೂರಿನ ಏರ್‌ಪೋರ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆಯಲ್ಲಿ  ಆರೋಪಿಗಳು ಸಿಕ್ಕಿಬಿದ್ದಿದ್ದು, ಬಂಧಿತರೆಲ್ಲರೂ ಕೇರಳ ಮೂಲದವರು ಎನ್ನಲಾಗಿದೆ. ಇನ್ಸ್‌ಪೆಕ್ಟರ್ ಕೆ. ಆರ್. ರಘು ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Key words: mysore-marijuana-accused- arrest-Police- seized