ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ ಕುಸಿತ ಹಿನ್ನೆಲೆ ಸಭೆ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಪ್ರಾಂಶುಪಾಲರು.

Promotion

ಮೈಸೂರು,ಅಕ್ಟೋಬರ್, 27,2022(www.justkannada.in):  ಇತ್ತೀಚೆಗೆ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಾಲೇಜು ಕಟ್ಟಡ ಕುಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಾಂಶುಪಾಲರು, ಅಧ್ಯಾಪಕರು  ಸಭೆ ನಡೆಸಿ ಧೈರ್ಯ ತುಂಬಿದರು.

ನಿರಂತರ ಮಳೆಯ ಪರಿಣಾಮ ಇತ್ತೀಚಿಗೆ ಕಾಲೇಜು ಕಟ್ಟಡ ಕುಸಿದುಬಿದ್ದಿತ್ತು. ಹೀಗಾಗಿ  ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಆತಂಕ ದೂರ ಮಾಡುವ ಸಲುವಾಗಿ ಇಂದು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಡಿ ರವಿ ಅವರು, ಕುಸಿದ ಪಾರಂಪರಿಕ ಕಟ್ಟಡದಲ್ಲಿ ಪ್ರಯೋಗಶಾಲೆ ಮತ್ತು ಕೆಲವು ತರಗತಿಗಳು ನಡೆಯುತ್ತಿದ್ದವು. ಸದರಿ ತರಗತಿಗಳನ್ನು ಪಕ್ಕದಲ್ಲೇ ಇರುವ ಹೊಸ ಕಟ್ಟಡದಲ್ಲಿ ನಡೆಸಲಾಗುತ್ತದೆ. ತರಗತಿಗಳು ಯಾವ ತೊಂದರೆಯೂ ಇಲ್ಲದೆ ನಡಯಲಿವೆ ಎಂದು ಪ್ರಾಂಶುಪಾಲರಾದ ಡಾ. ಡಿ.ರವಿ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ತಂಡ ಕಾಲೇಜಿನ ಪಾರಂಪರಿಕ ಕಟ್ಟಡವನ್ನು ಪರಿಶೀಲನೆ ನಡೆಸಿದ್ದು ಇನ್ನು ಕೆಲವೇ ದಿನಗಳಲ್ಲಿ ವರದಿ ನೀಡಲಿದ್ದಾರೆ. ಆ ನಂತರ ಮುಂದಿನ ಕ್ರಮವನ್ನು ಇಲಾಖೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಗಾಳಿಸುದ್ದಿ ನಂಬದಿರುವಂತೆ ಹಾಗು ಕುತೂಹಲಕ್ಕೂ ಕುಸಿದು ಬಿದ್ದಿರುವ ಕಟ್ಟಡದ ಬಳಿ ಹೋಗದಂತೆ ಎಚ್ಚರ ವಹಿಸುವಂತೆ  ಸೂಚಿಸಿದರು. ಸಭೆಯಲ್ಲಿ ಅಧ್ಯಾಪಕರು, ಕಛೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Key words: mysore-Maharani Women- Science -College -building –collapse- meeting