ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಮೇಳೈಸಿದ ಜಾನಪದ ಕಲರವ: ಸಖತ್ ಸ್ಟೆಪ್ಸ್ ಹಾಕಿ ಖುಷಿಪಟ್ಟ ವಿದ್ಯಾರ್ಥಿನೀಯರು..

ಮೈಸೂರು,ಮಾ,12,2020(www.justkannada.in): ಕಲರ್ ಫುಲ್ ಸೀರೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಫುಲ್ ಮಿಂಚಿಂಗ್, ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರಿಂದ ಸಖತ್ ಸ್ಟೆಪ್ಸ್, ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಅಧ್ಯಾಪಕರು, ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಮೇಳೈಸಿದ ಜಾನಪದ ಕಲರವ….

ಹೌದು, ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಹಯೋಗದಲ್ಲಿ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ ಕಾರ್ಯಕ್ರಮವನ್ನ  ಉದ್ಘಾಟನೆ ಮಾಡಿದರು. ಸಾಂಕೇತಿಕವಾಗಿ ಡೊಳ್ಳು ಬಾರಿಸುವ ಮೂಲಕ ಜಾನಪದ ಜಾತ್ರೆಗೆ ಗಣ್ಯರು ಚಾಲನೆ ನೀಡಿದರು.mysore-maharani-college-janapada-kalarava-folk-dance

ಇನ್ನು ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಲಾ ತಂಡಗಳ ಭವ್ಯ ಮೆರವಣಿಗೆ ನೆರವೇರಿತು. ಮೆರವಣಿಗೆಯಲ್ಲಿ  ಹಲವು ಕಲಾತಂಡಗಳು ಪಾಲ್ಗೊಂಡು ಜಾನಪದ ಲೋಕವನ್ನೆ ಸೃಷ್ಟಿಸಿದವು. ಕಂಸಾಳೆ, ಗೊರವರ ಕುಣಿತ, ಪೂಜಾಕುಣಿತ, ಡೊಳ್ಳುಕುಣಿತ ಸೇರಿದಂತೆ ಮೆರವಣಿಗೆಯಲ್ಲಿ ಹಲವು ಕಲಾಪ್ರಕಾರಗಳು ಭಾಗಿಯಾಗಿ ನೋಡುಗರ ಕಣ್ಮನ ಸೆಳೆದವು.

ಇನ್ನು ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರಿಂದ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದರೇ ಅಧ್ಯಾಪಕರು ವಿದ್ಯಾರ್ಥಿಗಳಿಗಿಂತ ತಾವೂ ಏನ್ ಕಡಿಮೆಯಿಲ್ಲ ಎಂಬಂತೆ ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಇನ್ನೊಂದೆಡೆ ಕಾಲೇಜು ವಿದ್ಯಾರ್ಥಿನೀಯರು  ಕಲರ್ ಫುಲ್ ಸೀರೆಯಲ್ಲಿ  ಮಿಂಚಿದರು.

ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ, ಕಾಲೇಜಿನ ಪ್ರಾಂಶುಪಾಲ ಬಿ. ಟಿ. ವಿಜಯ್ ಸೇರಿದಂತೆ ಹಲವರ ಉಪಸ್ಥಿತರಿದ್ದರು.

Akey words: mysore -Maharani College-janapada kalarava- folk dance