ಮೈಸೂರು ಭೂ ಅಕ್ರಮ ಪ್ರಕರಣ. ತನಿಖೆಗೆ ಕಾಲಾವಕಾಶ ಕೇಳಿದ ಜಿಲ್ಲಾಧಿಕಾರಿ.

 

ಮೈಸೂರು, ಅ.02, 2021 : (www.justkannada.in news ): ಮೈಸೂರು ಸುತ್ತಮುತ್ತಲಿನ ಪ್ರಭಾವಿಗಳ ಭೂ ಅಕ್ರಮ ಪ್ರಕರಣದ ತನಿಖೆಗೆ ಕಾಲಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತನ್ ಪತ್ರ.

ನಾಲ್ಕು ತಿಂಗಳು ಕಾಲಾವಕಾಶ ಕೇಳಿ ಪತ್ರ. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಂದ ಪತ್ರ. ಭೂ ಒತ್ತುವರಿ ಸಂಬಂಧ ಸಮಗ್ರ ತನಿಖೆ ನಡೆಯಬೇಕಿದೆ. ಸಂಬಂಧಪಟ್ಟವರಿಗೆ ತಿಳಿವಳಿಕೆ ನೋಟಿಸ್ ನೀಡಬೇಕು. ಜಂಟಿ ಸರ್ವೇ ಮೂಲಕ ಭೂಮಿ ಅಳತೆ ಮಾಡಬೇಕು. ಪ್ರತಿ ಹಂತದಲ್ಲೂ ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಭೂ ಮಾಪನ ಇಲಾಖೆ ಸಮನ್ವಯ ಅಗತ್ಯ.
ದಸರಾ ಹಾಗೂ ಕೋವಿಡ್ ತುರ್ತು ಕಾರ್ಯಗಳು ಇರುವುದರಿಂದ ಕಾಲಮಿತಿ ವಿಸ್ತರಿಸಲು ಮನವಿ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಸಿ ಮನವಿ.

ಮೈಸೂರು ತಾಲೂಕಿನ ಕೇರ್ಗಳ್ಳಿ, ದಟ್ಟಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮ. ಈ ಬಗ್ಗೆ ಹಿಂದಿನ ಡಿಸಿ ರೋಹಿಣಿ ಸಿಂಧೂರಿಗೆ ದೂರು ನೀಡಿದ್ದ ಆರ್​ಟಿಐ ಕಾರ್ಯಕರ್ತ ಗಂಗರಾಜು. ಭೂ ಅಕ್ರಮಗಳ ತನಿಖೆಗೆ 21 ದಿನಗಳಲ್ಲಿ ಗಡುವು ನೀಡಿದ್ದ ರಾಜ್ಯ ಸರ್ಕಾರ. ಗಡುವು ಮುಕ್ತಾಯವಾದ ಹಿನ್ನೆಲೆಯ ಕಾಲಾವಕಾಶ ಕೇಳಿದ ಡಾ.ಬಗಾದಿ ಗೌತಮ್.

key words : mysore-land-mafia- dc-enquiry-time-demand-mysore