BREAKING NEWS: ಪ್ರೊ. ಕೆ.ಎಸ್ ರಂಗಪ್ಪ ವಿರುದ್ಧದ ಎಫ್ ಐಆರ್ ರದ್ಧು ಪಡಿಸಿದ ಹೈಕೋರ್ಟ್…

ಮೈಸೂರು,ಸೆಪ್ಟಂಬರ್,23,2020(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ಅವ್ಯವಹಾರ‌ ಆರೋಪ ಸಂಬಂಧ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ವಿರುದ್ಧದ ಎಫ್ ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.jk-logo-justkannada-logo

ಪ್ರೊ. ಕೆ.ಎಸ್ ರಂಗಪ್ಪ ಸೇರಿದಂತೆ ನಾಲ್ವರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿರುವ ಹೈಕೋರ್ಟ್, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಿಂದ  ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಈಗ ಮತ್ತೆ  ಅದೇ   ಪ್ರಕರಣಕ್ಕೆ ಸಂಬಂಧೀಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲವೆಂದು ತಿಳಿಸಿ ಎಫ್ಐ‌ಆರ್ ಅನ್ನು ಹೈಕೋರ್ಟ್ ರದ್ಧುಪಡಿಸಿದೆ.mysore-ksou-high-court-of-karnataka-quashed-fir-against-prof-k-s-rangappa

ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ 20-11-2019 ರಂದು ಪ್ರೊ. ಕೆಎಸ್ ರಂಗಪ್ಪ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್(ಕ್ರೈಮ್ ನಂ 53/2019) ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಎಫ್ ಐ ಆರ್ ಅನ್ನು ರದ್ಧು ಪಡಿಸಿದೆ.

ಕಾನೂನು ದುರುಪಯೋಗ:

ಏಫ್ ಐ ಆರ್ ರದ್ಧುಪಡಿಸಿದ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಡಾಟ್ ಇನ್ ಪ್ರೊ. ಕೆಎಸ್ ರಂಗಪ್ಪ ಅವರನ್ನು ಸಂಪರ್ಕಿಸಿತು. ಆಗ ಇದೊಂದು  ಕಾನೂನು ನಿಯಮಗಳ ದುರುಪಯೋಗ( abuse of law) ಹಾಗೂ ಅನಗತ್ಯವಾಗಿ ತೊಂದರೆ ನೀಡುವ ಉದ್ದೇಶದಿಂದಲೇ ದೂರು ನೀಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ನ್ಯಾಯಾಲಯದ ಈ ಕ್ರಮ ಸ್ವಾಗತಾರ್ಹ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಯಾವುದೇ ಆಲೋಚನೆಯನ್ನು ಮಾಡಿಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ಸ್ಪಷ್ಟಪಡಿಸಿದರು.

Key words: mysore-KSOU- high court of karnataka-quashed-FIR-against-prof. K.S Rangappa