ಮೂರನೇ ಅಲೆ ಅಪ್ಪಳಿಸುವ ಮುನ್ನ ಫೀಲ್ಡ್ ಗಿಳಿದು ಕಾರ್ಯ ಪ್ರವೃತ್ತರಾಗಿ : ಪ್ರಧಾನಿಗೆ ‘ಕೈ’ ಮುಗಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ.

 

ಮೈಸೂರು, ಮೇ 23, 2021 : (www.justkannada.in news) ಕೊರೊನ 3ನೇ ಅಲೆಯಲ್ಲಿ ದೇಶದ ಮಕ್ಕಳನ್ನ ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೈ ಮುಗಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್.

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಪುಷ್ಪ ಅಮರನಾಥ್ ಹೇಳಿದಿಷ್ಟು..

ಕರೋನಾ 3 ನೇ ಅಲಗೆ ಬಗ್ಗೆ ಈವರೆಗೂ ಪ್ರಧಾನಿ ಒಂದೇ ಒಂದು ಸಭೆಯನ್ನು ಮಾಡಿಲ್ಲ. ಆರೋಗ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ದೇಶದಲ್ಲಿ ಕೊರೊನ ಮೂರನೇ ಅಲೆ ಪ್ರಾರಂಭವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

jk

ಮಕ್ಕಳ ಪೌಷ್ಟಿಕಾಂಶ ಹೆಚ್ಚು ಮಾಡಲು ಯಾವುದಾದರೂ ಔಷಧಿ ಕೊಡುತ್ತಿದ್ದೀರಾ..? ನಮ್ಮ ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳ ಆರೋಗ್ಯ ಕಾಪಾಡಲು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ , ನಮ್ಮ ತೆರಿಗೆ ಹಣದಲ್ಲಿ ಲಸಿಕೆ ಖರೀದಿಸಿ. ಮಕ್ಕಳನ್ನ ಕಾಪಾಡಿಕೊಳ್ಳಲು ತಜ್ಞರೇ ಸಲಹೆ ಕೊಡುತ್ತಿದ್ದಾರೆ. ಭವಿಷ್ಯದ ಜನರೇಷನ್ ಕಾಪಾಡಿಕೊಳ್ಳಬೇಕಿದೆ ಎಂದರು.
ಅಂಬಾನಿ ದೇಶದಲ್ಲೇ ಅತಿ ದೊಡ್ಡ ಶ್ರೀಮಂತ , ಅವರಿಂದ ಕೇವಲ 5%ಹಣ ಪಡೆದು ಲಸಿಕೆ ಖರೀದಿಸಿ. ಮುಂದಿನ ಒಂದು ತಿಂಗಳ ಒಳಗೆ ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುಲು ಪ್ರಧಾನಿ ಸೂಚನೆ ನೀಡಬೇಕು. ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಬಿಜೆಪಿಯ ಎಲ್ಲಾ 25 ಸಂಸದರು ಈ ಬಗ್ಗೆ ಮಾತನಾಡಿ.

Mysore-Helitourism-another feather-But-advisable-build-without-Damage-Pushpa Amar Nath

ನಮ್ಮ ತೆರಿಗೆ ಹಣದಲ್ಲೇ ಲಸಿಕೆ ಖರೀದಿಸಿ ಜನರ ಪ್ರಾಣ ಉಳಿಸಿ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಆಹಾರ ಸಿಗುತ್ತಿಲ್ಲ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಪೌಷ್ಟಿಕಾಂಶ ಕಾಪಾಡಿಕೊಳ್ಳಲು ಮುಂದಾಗಬೇಕು. ಮಲ್ಟಿ ವಿಟಮಿನ್ ಟ್ಯಾಬ್ಲೆಟ್ಸ್, ಸಿರಪ್ಸ್ ನೀಡಿದರೆ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಬಹುದು. ನಮ್ಮ ಮಕ್ಕಳ ಭವಿಷ್ಯ ಪ್ರಧಾನಿ ಮೋದಿ ಅವರ ಕೈಯಲ್ಲಿದೆ. ನಮ್ಮ ದೇಶದ ಮಕ್ಕಳನ್ನ ಕಾಪಾಡಿ. ಪತ್ರಿಕಾಗೋಷ್ಠಿಯಲ್ಲಿ ಕೈ ಮುಗಿದು ಮನವಿ ಮಾಡಿದ ಪುಷ್ಪಅಮರನಾಥ್.

 

key words : mysore-kpcc-women-president-pushpa-amarnath-request-pm-modi