ಬೇಸಿಗೆ ಆರಂಭಕ್ಕೂ ಮುನ್ನವೇ ಸೊರಗಿದ ಕಪಿಲೆ: ಕಬಿನಿ ಜಲಾಯಶದಲ್ಲಿ ನೀರಿನ ಮಟ್ಟ ಇಳಿಕೆ…

ಮೈಸೂರು,ಜ,10,2020(www.justkannada.in): ಕಳೆದ ಅಕ್ಟೋಬರ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಿಂದ ಬೋರ್ಗೆರಿದಿದ್ದ ಕಪಿಲೆ ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಸೊರಗುತ್ತಿದ್ದಾಳೆ. ಹೌದು  ಬೇಸಿಗೆ ಆರಂಭಕ್ಕೂ ಮುನ್ನವೇ ಕಪಿಲೆಯ ಒಡಲು ಬತ್ತುತ್ತಿದೆ.

ಕಬಿನಿ ಜಲಾಯಶದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು ಸಂಕ್ರಾಂತಿ ಸುಗ್ಗಿ ಸಂಭ್ರಮದ ನಂತರ ನೀರಿನ ಹಾಹಾಕಾರ ಉಂಟಾಗುವ ಸಂಭವವಿದೆ. ಕಪಿಲೆ ಒಡಲು ಬತ್ತುತ್ತಿರುವುದರಿಂದ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಮನೆ ಮಾಡಿದೆ.

ಬೇಸಿಗೆ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳಿದೆ. ಆದ್ರೆ, ಇದಕ್ಕೂ ಮುನ್ನವೇ ಕಪಿಲೆ ಸೊರಗುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ರಣಬಿಸಿಲು ಹಾಗೂ ರಣದಾಹ ಎದುರಿಸಲು ಸಜ್ಜಾಗಿ ಎಂಬ ಸಂದೇಶವನ್ನ ಕಪಿಲೆ  ರವಾನಿಸುತ್ತಿದ್ದಾಳೆ. ಧಾರಾಕಾರ ಮಳೆಯಿಂದ ಕಪಿಲೆಯ ಒಡಲು ತುಂಬಿ ಪ್ರವಾಹದಿಂದ ಬೋರ್ಗರೆಯುತ್ತಿತ್ತು. ಇದೀಗ ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಕಪಿಲೆಯ ಒಡಲು ಬತ್ತುತ್ತಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ.

Key words: mysore- Kapila river- scratched –before- summer- began