Promotion
ಮೈಸೂರು, ಆ.09, 2020 : (www.justkannada.in news) ಒಳ ಹರಿವು ಕಡಿಮೆಗೊಂಡ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ನಿನ್ನೆವರೆಗೂ 76,000 ಕ್ಯೂಸೆಕ್ ಇದ್ದ ಹೊರಹರಿವು ಈಗ 30,000 ಕ್ಯೂಸೆಕ್ ಗೆ ಇಳಿಕೆಗೊಂಡಿದೆ.
ಮುಂದುವರಿದ ವಾಹನ ನಿರ್ಬಂಧ.
ಊಟಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧ. ಚಿಕ್ಕಯ್ಯನಛತ್ರ ಗ್ರಾಮದ ಬಳಿ ಬ್ಯಾರಿಕೇಡ್. ಮಲ್ಲಯ್ಯನಮೂಲೆ ಮಠದ ಸಮೀಪ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು.
ಪರ್ಯಾಯ ಮಾರ್ಗ :
ಮೈಸೂರು- ನಂಜನಗೂಡಿಗೆ ತೆರಳುವ ಎಲ್ಲ ವಾಹನಗಳಿಗೂ ಪರ್ಯಾಯ ಮಾರ್ಗ. ಕೆಂಪಿಸಿದ್ದನಹುಂಡಿ, ಬಸವಾಪುರ ಮಾರ್ಗವಾಗಿ ಸಂಚರಿಸುತ್ತಿರುವ ವಾಹನಗಳು
ooo
key words : mysore-kabini-water-level-decreased