ಜ್ಯುಬಿಲೆಂಟ್ ಬಳಿಕ ಈಗ ಮೈಸೂರಿನ ಜೆ.ಕೆ.ಟೈ‌ಯರ್ಸ್ ಕಾರ್ಖಾನೆಯಲ್ಲಿ ಕೊರೊನಾ ತಂದಿಟ್ಟಿದೆ ಆತಂಕ

kannada t-shirts

ಮೈಸೂರು, ಜುಲೈ 19, 2020 (www.justkannada.in): ನಂಜನಗೂಡು ಜ್ಯುಬಿಲೆಂಟ್ ಬಳಿಕ ಈಗ ಮೈಸೂರಿನ ಜೆ.ಕೆ.ಟೈರ‌್ಸ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

*ಜೆ.ಕೆ.ಟೈರ್ಸ್ ಕಾರ್ಖಾನೆಯ 50ಕ್ಕೂ ಮಂದಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಸಾಮೂಹಿಕ ಕೋವಿಡ್ ಪರೀಕ್ಷೆ ಸಂದರ್ಭದಲ್ಲಿ ಪ್ರಕರಣ ಪತ್ತೆಯಾಗಿದೆ.

ಜೆ.ಕೆ.ಟೈರ್ಸ್‌ನ ಮೂರು ಘಟಕದ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮೈಸೂರಿನ ಹೆಬ್ಬಾಳ, ಮೇಟಗಳ್ಳಿಯಲ್ಲಿರುವ ಜೆ.ಕೆ. ಟೈರ್ಸ್ ಕಾರ್ಖಾನೆಯ ಮೂರು ಘಟಕಗಳು.
6500 ಸಿಬ್ಬಂದಿ ಇರುವ ಕಾರ್ಖಾನೆ.

ಎರಡು ಖಾಸಗಿ ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿಗೂ ಕರೊನಾ ಪರೀಕ್ಷೆ ನಡೆಸಲಾಸಗುತ್ತಿದೆ. ಸೋಂಕಿತರು ಕೋವಿಡ್ ಆಸ್ಪತ್ರೆಗೆ ಸ್ಥಳಾಂಂತರ ಮಾಡಲಾಗಿದೆ.

ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಕಿತರಿಗೆ ಗಂಟಲು ದ್ರವ ಮಾದರಿ ಸಂಗ್ರಹ ಮಾಡಲಾಗಿದೆ.

ಜೆ.ಕೆ.ಟೈರ್ಸ್‌ ಕಾರ್ಖಾನೆ ಮೂರು ದಿನಗಳ ಮಟ್ಟಿಗೆ ಸೀಲ್‍ಡೌನ್.
ಸೋಂಕಿತರ ಸಂಪರ್ಕಕ್ಕೆ ಬಂದ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಸಿದ್ಧತೆ ನಡೆದಿದೆ.

ಹೆಬ್ಬಾಳ, ಮೇಟಗಳ್ಳಿಯ ಘಟಕಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ.

website developers in mysore