ವಿಕಲ ಚೇತನರಿಗೆ ಚೈತನ್ಯ ತುಂಬಿದ ನಮ್ ‘ ಗಂಧದಗುಡಿ ‘ ಟೆಕ್ಕಿಸ್..

 

ಮೈಸೂರು, ಜೂ.13, 2021 : (www.justkannada.in news ) ಕೋರೋನ ಸಂಕಷ್ಟ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸುತ್ತ, ಮೈಸೂರಿನ ಪ್ರತಿಷ್ಟಿತ ಐಟಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗ ಇಂಜಿನಿಯರಗಳ ‘ ಗಂಧದ ಗುಡಿ’ ತಂಡದ ವತಿಯಿಂದ ಇಂದು ನಂಜನಗೂಡು ತಾಲೂಕಿನಲ್ಲಿ ವಿಕಲ ಚೇತನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ತಾಲೊಕಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೌರವ ಧನ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸ್ವತಃ ವಿಕಲ ಚೇತನರಾದ, ವಿಕಲ ಚೇತನ ಪುನರ್ವಸತಿ ಕಾರ್ಯಕರ್ತರುಗಳಿಗೆ, ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ಅನ್ನು ವಿತರಿಸಲಾಯಿತು.

jk

ಮೈಸೂರು ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಅರ್ಜುನ್ ಎಚ್. ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮೈಸೂರು ಗಂಧದಗುಡಿ ತಂಡಕ್ಕೆ ತಿಲಕನಗರ ಕೇಂದ್ರದ ತಂಡದ ಪರವಾಗಿ ಅಭಿನಂದನೆಗಳನ್ನು ಸಲ್ಲಿದರು.

ಗಂಧದಗುಡಿ ಸದಸ್ಯ ಮನೋಜ್ ಪಾಟೀಲ್ ಮಾತನಾಡಿ, ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮದ ಬಗ್ಗೆ ವಿವರಿಸುತ್ತ, ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು | ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ | ಎಲ್ಲರೊಳಗೊಂದಾಗು – ಮಂಕುತಿಮ್ಮ || ಎಂಬ ಮಂಕುತಿಮ್ಮನ ಕಗ್ಗ ಉಚ್ಚರಿಸಿ, ಸಂಕಷ್ಟ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಸಮಾನ ಮನಸ್ಕ ಕನ್ನಡ ಇಂಜಿನಿಯರ ಗಳ ತಂಡದ ವತಿಯಿಂದ ಅರ್ಹರನ್ನು ಗುರುತಿಸಿ ದಿನಸಿ ಕಿಟ್ ಸಿದ್ದ ಪಡಿಸಿ ವಿತರಣೆ ಮಾಡುತ್ತಿದ್ದು, ಇಂದು ನಂಜನಗೂಡು ತಾಲ್ಲೂಕು ಮಟ್ಟದ ವಿಕಲ ಚೇತನ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ ಮಾಡಿದೆವು. ಹಾಗೂ ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಗಂಧದ ಗುಡಿ ಸದಸ್ಯರೆಲ್ಲರಿಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗಂಧದಗುಡಿ ಸದಸ್ಯರಾದ ಕೀರ್ತಿರಾಜ್, ಗಣೇಶ್, ಉತ್ತಮ, ನಿತಿನ್, ಮಂಜುನಾಥ್ ಹಾಗೂ ರಮೇಶ್ ಉಪಸ್ಥಿತರಿದ್ದರು.

key words : mysore-it-gandadagudi-covid-kit-nanjangudu