MYSORE : ಸಚಿವ ಎಸ್.ಟಿ.ಸೋಮಶೇಖರ್ ಹೋದಲ್ಲೆಲ್ಲಾ ಸೋಲು ?

MYSORE-BJP-CONGRESS

 

ಮೈಸೂರು, ಜು.11, 2022 : (www.justkannada.in news)ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಕಾಂಗ್ರೆಸ್ ನಿಂದ ಎಲ್ಲವನ್ನೂ ಪಡೆದು ಈಗ ಕಾಂಗ್ರೆಸ್ ಅನ್ನೇ ದೂರುತ್ತಿರುವ ಅವರ ಬಗ್ಗೆ ಏನು ಹೇಳಬೇಕೋ ತಿಳಿಯದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಂ. ಲಕ್ಷ್ಮಣ್ ಅವರು ಹೇಳಿರುವುದಿಷ್ಟು..

ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರೆ ಉಳಿಗಾಲ ಇಲ್ಲ, ಠೇವಣಿ ಬರಲ್ಲ ಎಂದು ಹೇಳುವ ಸೋಮಶೇಖರ್, ತಮ್ಮ ಪೂರ್ವಾಶ್ರಮ ನೆನಪಿಸಿಕೊಳ್ಳಬೇಕು. ಮತ್ತೀಗ ಅವರಿಂದ ಆಗುತ್ತಿರುವ ಘನ ಕೊಡುಗೆಯ ಬಗ್ಗೆಯೂ ನೋಡಿಕೊಳ್ಳಬೇಕು.
ಕಾಂಗ್ರೆಸ್ ನನಗೆ ಏನೆಲ್ಲ ಕೊಟ್ಟಿದೆ ಎಂಬ ಬಗ್ಗೆ ಒಮ್ಮೆ ನೆನಪು ಮಾಡಿಕೊಳ್ಳಿ. ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ನಿಮಗೆ ಟಿಕೆಟ್ ನೀಡಿದ್ದೆವು. ಆದರೆ ನೀವು ಅಲ್ಲೆ ಸೋತಿದ್ದಿರಿ. ಉತ್ತರಹಳ್ಳಿಯಲ್ಲಿ ಮತ್ತೊಮ್ಮೆ ಟಿಕೆಟ್ ಕೊಟ್ಟರೂ ಸೋತಿರಿ. ಯಶವಂತಪುರದಲ್ಲಿ ಸಹ ನಿಮಗೆ ಕಾಂಗ್ರೆಸ್ ನಿಂದ ಟಿಕೆಟ್ ಕೊಡಲಾಯ್ತು. ಅಲ್ಲೂ ಸಹ ಒಂದು ಬಾರಿ ಸೋತಿರಿ.

2013ರಲ್ಲಿ ನಿಮಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಅಧ್ಯಕ್ಷ ಸ್ಥಾನವನ್ನೂ ಕೊಡಲಾಯಿತು. ಅಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಿಮಗೆ ಬಿಡಿಎ ಅಧ್ಯಕ್ಷ ಸ್ಥಾನವನ್ನೂ ಕೊಡಲಾಯಿತು. ನಿಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ನೀಡಿತು. ಇಷ್ಟೆಲ್ಲವನ್ನೂ ನಿಮಗೆ ಕಾಂಗ್ರೆಸ್ ಕೊಟ್ಟರೂ ಸಹ ನೀವು ಆಪರೇಷನ್ ಕಮಲಕ್ಕೆ ತುತ್ತಾಗಿ ಚೇಲಾ ಆಗಿ ಬಿಟ್ಟಿರಿ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿರಿ. ಇದು ಸರಿಯೇ ?

ಈಗ ನೀವು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದೀರಿ. ಆದರೆ ನೀವು ಬಿಜೆಪಿಗೆ ಏನು ಮಾಡಿದಿರಿ? ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಲ್ಲಿ ಪಕ್ಷವನ್ನು ಒಡಿದಿರಿ. ಅಲ್ಲಿನ ಪ್ರಭಾವಿ ನಾಯಕರಾದ ರಾಮದಾಸ್ ಅವರನ್ನು ಮೂಲೆಗುಂಪು ಮಾಡಿದಿರಿ. ನೀವು ಕಾಂಗ್ರೆಸ್ ಮುಳುಗಿದೆ ಎಂದು ಹೇಳುತ್ತಿದ್ದೀರಿ.. ಹಾಗಿದ್ದರೆ ಮುಳುಗಿದ್ದು ಯಾವುದು? ಬಿಜೆಪಿಯೇ ಅಲ್ಲವೇ? ಮೈಸೂರಿನಲ್ಲಿ ಕಾರ್ಪೋರೇಷನ್ ಚುನಾವಣೆ ಸೋತಿದ್ದೀರಿ, ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನಿಮ್ಮ ಕೈಯಲ್ಲಿ ಆಗಲಿಲ್ಲ. ಪದವೀಧರ ಕ್ಷೇತ್ರದಲ್ಲಿಯೂ ಸಹ ಬಿಜೆಪಿಯನ್ನು ನಿಮ್ಮ ಕೈಯಿಂದ ಗೆಲ್ಲಿಸಲು ಆಗಲಿಲ್ಲ.

ನೀವು ಹೋಗಿರುವ ಭಾಗದಲ್ಲಿ ಬಿಜೆಪಿ ಮುಳುಗುತ್ತಿದೆಯೇ ವಿನಃ ಕಾಂಗ್ರೆಸ್ ಮುಳುಗುತ್ತಿಲ್ಲ. ಹೀಗಾಗಿ ನಿಮ್ಮ ಕಾಲು ಬುಡವನ್ನು ಒಮ್ಮೆ ನೋಡಿಕೊಳ್ಳಿ. ಎಲ್ಲವನ್ನೂ ಕೊಟ್ಟ ಕಾಂಗ್ರೆಸನ್ನು ಮರೆತಿದ್ದೀರಿ. ಮೊದಲು ನಿಮ್ಮ ಪಕ್ಷವನ್ನು ಉಳಿಸಿಕೊಳ್ಳಿ.

KEY WORDS : MYSORE-BJP-CONGRESS