ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಟ್ರಿಣ್ ಟ್ರಿಣ್ ಸೈಕಲ್’ ಗೆ ಮತ್ತೆ ಹೆಚ್ಚಾಯ್ತು ಡಿಮ್ಯಾಂಡ್….

ಮೈಸೂರು,ಜನವರಿ,5,2021(www.justkannada.in):   ಕೊರೋನಾ ಮಹಾಮಾರಿ ಮತ್ತು ಲಾಕ್ ಡೌನ್, ನಂತರದ ಕೆಲ ದಿನಗಳಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿನ ಟ್ರಿಣ್ ಟ್ರಿಣ್ ಸೈಕಲ್  ಸೇವೆಗೆ ಡಿಮ್ಯಾಂಡ್ ಕುಸಿದಿತ್ತು. ಇದೀಗ ಶಾಲೆ ಕಾಲೇಜು ಆರಂಭವಾದ ಬೆನ್ನಲ್ಲೆ  ಟ್ರಿಣ್ ಟ್ರಿಣ್ ಸೈಕಲ್  ಬಳಕೆ ಹೆಚ್ಚಾಗಿದೆ.jk-logo-justkannada-mysore

ಕೊರೊನಾದಿಂದಾಗಿ ಟ್ರಿಣ್ ಟ್ರಿಣ್  ಸೈಕಲ್ ಬಳಕೆಯಿಂದ ಜನ ಹಿಂದೆ ಸರಿದಿದ್ದರು. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಲ್ಲದೆ  ಟ್ರಿಣ್ ಟ್ರಿಣ್ ಸೇವೆಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿರಲಿಲ್ಲ. ಇದೀಗ  ಟ್ರಿಣ್ ಟ್ರಿಣ್ ಸೈಕಲ್ ಬಳಕೆದಾರರು ಯಥಾಸ್ಥಿತಿಗೆ ಮರಳುತ್ತಿದ್ದು, ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆ 70%ನಷ್ಟು ಚೇತರಿಕೆ ಕಂಡಿದೆ.

ಹೌದು ಇದೀಗ ಶಾಲೆ ಕಾಲೇಜು ಆರಂಭವಾಗಿದ್ದು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿರುವ ಹಿನ್ನೆಲೆ ಟ್ರಿಣ್ ಟ್ರಿಣ್ ಸೈಕಲ್ ಬಳಕೆ ಸೇವೆ ಎಂದಿನಂತೆ  ಯಥಾಸ್ಥಿತಿಗೆ ಮರಳಿದೆ.cultural city – Mysore- trin trin- Bicycle -Service -available

ಮೈಸೂರಿನಲ್ಲಿ 52 ಸ್ಟ್ಯಾಂಡ್ ಗಳಿದ್ದು, 450 ಬೈಸಿಕಲ್ ಗಳಿವೆ. ಇದುವರೆಗೂ ಒಟ್ಟು 14641 ನೋಂದಣಿಯಾಗಿದ್ದು , ರೈಲು ನಿಲ್ದಾಣದ ಟ್ರಿಣ್ ಟ್ರಿಣ್ ಸ್ಟ್ಯಾಂಡ್, ಯುನಿವರ್ಸಿಟಿ ಸ್ಟ್ಯಾಂಡ್ ಹೊರತು ಪಡಿಸಿ ಉಳಿದೆಲ್ಲಾ ಸ್ಟ್ಯಾಂಡ್ ಗಳಲ್ಲಿ ಟ್ರಿಣ್ ಟ್ರಿಣ್ ಬಳಕೆ ಹೆಚ್ಚಾಗಿದೆ.

Key words:  Mysore -increased – demand – Trinh Trin- Cycle.